ಗಂಗಾವತಿ: ಪ್ರಧಾನಿ ಮೋದಿ ಅವರ ನೇತೃತ್ವದ ಬಿಜೆಪಿ ಸರ್ಕಾರ ಎರಡನೇ ಬಾರಿಗೆ ದೇಶದ ಚುಕ್ಕಾಣಿ ಹಿಡಿದು ಒಂದು ವರ್ಷ ಪೂರೈಸಿದ ಹಿನ್ನೆಲೆ ನಗರದ ಪರಿಸರ ಪ್ರೇಮಿ ಮಧುಚಂದ್ರ ಅವರು ನಗರಸಭೆ ಸದಸ್ಯರಿಗೆ ತಲಾ ನೂರು ಸಸಿಗಳನ್ನು ವಿತರಿಸಿದರು.
ಕನಕದಾಸ ವೃತ್ತದ ಸಮೀಪದ ಕೆಎಚ್ಬಿ ಕಾಲೊನಿಯ ಸಾರ್ವಜನಿಕ ಉದ್ಯಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಶಾಸಕ ಪರಣ್ಣ ಮುನವಳ್ಳಿ, ನಗರಸಭಾ ಸದಸ್ಯರಿಗೆ ಸಸಿಗಳನ್ನು ವಿತರಿಸಿದರು.
ಸಸಿ ವಿತರಿಸಿ ಮಾತನಾಡಿದ ಮಧುಚಂದ್ರ ಅವರು, ಮೋದಿ ನೇತೃತ್ವದ ಸರ್ಕಾರ ಒಂದು ವರ್ಷ ಪೂರೈಸಿರುವುದು ಕೇವಲ ನೆಪ ಮಾತ್ರ. ಸಸಿ ಬೆಳಸಿ ಪರಿಸರ ಕಾಪಾಡುವುದು ನನ್ನ ಗುರಿ. ಅದಕ್ಕಾಗಿ ಸಸಿ ವಿತರಣೆ ಮಾಡಿದ್ದೇನೆ ಎಂದರು.