ETV Bharat / state

ಗಂಗಾವತಿಯಲ್ಲಿ ಪಿಎಫ್​ಐ ಮುಖಂಡ ಪೊಲೀಸ್ ವಶಕ್ಕೆ - etv bharat kannada

ಗಂಗಾವತಿಯಲ್ಲಿ ಕೊಪ್ಪಳ ಜಿಲ್ಲಾ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ಮುಖಂಡ ಅಬ್ದುಲ್ ಫೈಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

pfi-leader-detained-in-gangavati
ಗಂಗಾವತಿಯಲ್ಲಿ ಪಿಎಫ್​ಐ ಮುಖಂಡ ಪೊಲೀಸ್ ವಶಕ್ಕೆ
author img

By

Published : Sep 22, 2022, 10:05 AM IST

Updated : Sep 22, 2022, 12:16 PM IST

ಗಂಗಾವತಿ: ಬೆಂಗಳೂರಿನ ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಪ್ಪಳ ಜಿಲ್ಲಾ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಸಂಘಟನೆ ಮುಖಂಡ ಅಬ್ದುಲ್ ಫೈಯಾಜ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇಲ್ಲಿನ ಈದ್ಗಾ ಕಾಲೋನಿಯ ಫೈಯಾಜ್ ಮನೆ ಮೇಲೆ ಇಂದು ಮೇಲೆ ಬೆಳಗಿನಜಾವ ಅಧಿಕಾರಿಗಳು ದಾಳಿ ನಡೆಸಿದ್ದರು.

ಅಬ್ದುಲ್ ಫೈಯಾಜ್​ನನ್ನು ವಿಚಾರಣೆಗಾಗಿ ಸ್ಥಳೀಯ ಪೊಲೀಸ್ ಠಾಣೆಗೆ ಕರೆದೊಯ್ಯಲಾಗಿತ್ತು. ಪ್ರಾಥಮಿಕ ವಿಚಾರಣೆಯ ಬಳಿಕ ವ್ಯಕ್ತಿಯನ್ನು ಬೆಂಗಳೂರು ಪೊಲೀಸರು ಕರೆದೊಯ್ದಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಅಬ್ದುಲ್ ಫೈಯಾಜ್ 19ನೇ ಆರೋಪಿಯಾಗಿದ್ದ. ದಾಳಿ ವೇಳೆ ವ್ಯಕ್ತಿಯಿಂದ ಲ್ಯಾಪ್ ಟಾಪ್, ಮೊಬೈಲ್ ಮತ್ತು ನಾಲ್ಕು ಸಿಮ್ ಕಾರ್ಡ್​​ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸ್​ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕೊಪ್ಪಳ ಜಿಲ್ಲಾ ಎಸ್ಪಿ ಅರಣಂಗ್ಶು ಗಿರಿ ಭೇಟಿ ನೀಡಿದ್ದರು.

ಇದನ್ನೂ ಓದಿ: ಬೆಂಗಳೂರಿನಲ್ಲಿರುವ ಪಿಎಫ್ಐ ರಾಷ್ಟ್ರೀಯ ಕಾರ್ಯದರ್ಶಿ ನಿವಾಸದ ಮೆಲೆ ಎನ್ಐಎ ದಾಳಿ

Last Updated : Sep 22, 2022, 12:16 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.