ಕೊಪ್ಪಳ : ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‌ಡೌನ್ ಜಾರಿಯಾಗಿರುವ ನಡುವೆಯೂ ಮಂಗಳವಾರ ಹಾಗೂ ಬುಧವಾರ ಮಧ್ಯಾಹ್ನವರೆಗೆ ಬ್ಯಾಂಕ್ ವ್ಯವಹಾರಕ್ಕೆ ಅವಕಾಶ ಕಲ್ಪಿಸಲಾಗಿದ್ದು, ನಗರದಲ್ಲಿ ಬ್ಯಾಂಕುಗಳ ಮುಂದೆ ಜನ ಮುಗಿಬಿದ್ದಿದ್ದಾರೆ.
ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಕಳೆದ ವಾರ ಜಿಲ್ಲೆಯಲ್ಲಿ ಐದು ದಿನಗಳ ಕಾಲ ಸಂಪೂರ್ಣ ಲಾಕ್‌ಡೌನ್ ಜಾರಿ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಬ್ಯಾಂಕುಗಳು ಸಹ ಬಂದ್ ಆಗಿದ್ದವು. ನಿನ್ನೆಯಿಂದ ಮತ್ತೆ ಮೇ 30ರವರೆಗೆ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿದೆ.
ಈ ನಡುವೆ ಜಿಲ್ಲಾಡಳಿತ ಮಂಗಳವಾರ ಹಾಗೂ ಬುಧವಾರ ಎರಡು ದಿನ ಮಧ್ಯಾಹ್ನ 12 ಗಂಟೆಯವರೆಗೆ ಬ್ಯಾಂಕ್ ವ್ಯವಹಾರಕ್ಕೆ ಅವಕಾಶ ನೀಡಿದೆ. ಹೀಗಾಗಿ, ನಗರದ ಬ್ಯಾಂಕುಗಳ ಮುಂದೆ ಬೆಳಗ್ಗೆಯಿಂದಲೇ ಜನರು ಸಾಲುಗಟ್ಟಿ ನಿಂತಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ದುಡಿದ ಕೂಲಿ ಹಣ ಜಮಾ ಆಗಿರುವುದನ್ನು ತೆಗೆದುಕೊಳ್ಳಲು ಮತ್ತು ವಿವಿಧ ಬ್ಯಾಂಕಿನ ವ್ಯವಹಾರಕ್ಕಾಗಿ ಜನರು ಬ್ಯಾಂಕುಗಳ ಮುಂದೆ ಸೇರಿದ್ದಾರೆ. ಸಾಮಾಜಿಕ ಅಂತರ ಅನ್ನೋದು ಅಲ್ಲಿ ಮಂಗಮಾಯವಾಗಿತ್ತು.