ETV Bharat / state

ಇದ್ದಾಗ ಚಿಕಿತ್ಸೆ ಕೊಡದೇ ಸತ್ಮೇಲೆ ಕೊರೊನಾ ಅಂದ್ರೇ.. ಕೊಪ್ಪಳ ಜಿಲ್ಲಾಸ್ಪತ್ರೆ ವೈದ್ಯರ ವಿರುದ್ಧ ಆಕ್ರೋಶ - ಕೊಪ್ಪಳ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ

ನೆಲದ ಮೇಲೆಯಾದ್ರೂ ಚಿಕಿತ್ಸೆ ನೀಡಿ ಎಂದು ಅಂಗಲಾಚಿದೆವು. ಆದರೂ ಸಹ ವೈದ್ಯರು ಚಿಕಿತ್ಸೆ‌ ನೀಡಲಿಲ್ಲ. ಬೆಡ್ ಇಲ್ಲ ಎಂದು ಹೇಳಿದರು. ಹೀಗಾಗಿ ನಮ್ಮ ತಂದೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಬಳಿಕ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಈಗ ಕೊರೊನಾ ಪಾಸಿಟಿವ್ ಇದೆ ಎಂದು ಹೇಳುತ್ತಿದ್ದಾರೆ..

Old man died of neglect of doctor in Koppal district hospital
ಕೊಪ್ಪಳ ಜಿಲ್ಲಾಸ್ಪತ್ರೆ
author img

By

Published : Sep 8, 2020, 4:23 PM IST

ಕೊಪ್ಪಳ : ಬೆಡ್ ಕೊರತೆ ಜತೆಗೆ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದ ಕಾರಣ ಜಿಲ್ಲಾಸ್ಪೆತ್ರೆಗೆ ಚಿಕಿತ್ಸೆಗೆಂದು ಬಂದಿದ್ದ ವೃದ್ಧ ಮೃತಪಟ್ಟ ಘಟನೆ ನಗರದಲ್ಲಿ ನಡೆದಿದೆ.

ಜಿಲ್ಲೆಯ ಕುಷ್ಟಗಿ ತಾಲೂಕಿನ ಕಲಾಲಬಂಡಿ ಗ್ರಾಮದ ಶಿವಪ್ಪ ಸಕ್ರಪ್ಪ ಮೇಟಿ (75) ಎಂಬ ವೃದ್ಧನನ್ನು ಇಂದು ಬೆಳಗ್ಗೆ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆ ತಂದಿದ್ದರು. ಕಫದ ಸಮಸ್ಯೆಯಿಂದ ಬಳಲುತ್ತಿದ್ದ ವೃದ್ಧನಿಗೆ ಬೆಡ್​ ಖಾಲಿ ಇರದ ಕಾರಣ ಜಿಲ್ಲಾಸ್ಪತ್ರೆಯ ವೈದ್ಯರು ಚಿಕಿತ್ಸೆ ನೀಡಲು ನಿರಾಕರಿಸಿದ್ದಾರೆ.

ಕೊಪ್ಪಳ ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯಕ್ಕೆ ವೃದ್ಧ ಬಲಿ ಆರೋಪ

ನೆಲದ ಮೇಲೆಯಾದ್ರೂ ಚಿಕಿತ್ಸೆ ನೀಡಿ ಎಂದು ಅಂಗಲಾಚಿದೆವು. ಆದರೂ ಸಹ ವೈದ್ಯರು ಚಿಕಿತ್ಸೆ‌ ನೀಡಲಿಲ್ಲ. ಬೆಡ್ ಇಲ್ಲ ಎಂದು ಹೇಳಿದರು. ಹೀಗಾಗಿ ನಮ್ಮ ತಂದೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ಬಳಿಕ ಶವವನ್ನು ತೆಗೆದುಕೊಂಡು ಹೋಗಿದ್ದಾರೆ. ಸದ್ಯ ಕೊರೊನಾ ಪಾಸಿಟಿವ್ ಇದೆ ಎಂದು ಹೇಳುತ್ತಿದ್ದಾರೆ.

ಚಿಕಿತ್ಸೆ ನೀಡದೆ ಈಗ ಕೊರೊನಾ ಪಾಸಿಟಿವ್ ಇದೆ ಎಂದು ಹೇಳಿ ಶವ ನೀಡುತ್ತಿಲ್ಲ. ಜಿಲ್ಲಾಸ್ಪತ್ರೆಯ ವೈದ್ಯರು ಬೆಡ್ ನೀಡದೆ, ಚಿಕಿತ್ಸೆಯನ್ನೂ ನೀಡದೆ ಇರುವುದರಿಂದ ವೃದ್ಧ ಸಾವನ್ನಪ್ಪಿದ್ದಾನೆ ಎಂದು ಮೃತನ ಕುಟುಂಬಸ್ಥರು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದರು.

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.