ETV Bharat / state

39 ವರ್ಷಗಳಿಂದ ಜಾತ್ರೆಗೆ ಬ್ರೇಕ್​ ಹಾಕಿದ್ದ ಗ್ರಾಮಸ್ಥರು... ಕಾರಣ ಏನ್​ ಗೊತ್ತಾ? - ಕೊಪ್ಪಳ

ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಬರೋಬ್ಬರಿ 39 ವರ್ಷಗಳ ಬಳಿಕ ಜಾತ್ರೆಯ ಸಂಭ್ರಮ ಮಾಡಿದೆ. ಸಕಲ ಸಿದ್ಧತೆಗಳೊಂದಿಗೆ ಮೇ 7 ರಿಂದ 15ರವರೆಗೆ ಜಾತ್ರೆ ಜರುಗಲಿದೆ. ಗ್ರಾಮದಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಪಾಲಿಸಲಾಗುತ್ತಿದೆ.

ಗ್ರಾಮ ದೇವತೆ ಜಾತ್ರೆ
author img

By

Published : May 5, 2019, 2:53 PM IST

ಕೊಪ್ಪಳ: ಈ ಗ್ರಾಮ ದೇವತೆಯ ದ್ಯಾಮಮ್ಮನ ಜಾತ್ರೆ ಜರುಗಿ 39 ವರ್ಷಗಳೇ ಕಳೆದಿವೆ. ಕಟ್ಟುನಿಟ್ಟಿನ ಆಚರಣೆ ಪಾಲಿಸಲು ಆಗುವುದಿಲ್ಲವೆಂದು ಜಾತ್ರೆಯನ್ನು ಆಚರಿಸಿರಲಿಲ್ಲ. ಈಗ ಗ್ರಾಮದ ಮುಖಂಡರೆಲ್ಲ ಸೇರಿಕೊಂಡು ಮತ್ತೆ ಗ್ರಾಮದ ಆರಾಧ್ಯ ದೇವತೆಯಾದ ದ್ಯಾಮಮ್ಮನ ಜಾತ್ರೆಗೆ ಸಜ್ಜಾಗಿದ್ದಾರೆ.

ಹೌದು, ಕೊಪ್ಪಳ ತಾಲೂಕು ಹಲಗೇರಿ ಗ್ರಾಮದ ದ್ಯಾಮಮ್ಮ ಮತ್ತು ದುರ್ಗಮ್ಮ ದೇವತೆಯ ಕಟ್ಟು ನಿಟ್ಟಿನ ಆಚರಣೆಯಲ್ಲಿ ಯಾವುದೇ ವ್ಯತ್ಯಾಸವಾಗುವಂತಿಲ್ಲ. ಅದಕ್ಕಾಗಿಯೇ 39 ವರ್ಷಗಳಿಂದ ಆಚರಿಸದೇ ಹಾಗೇ ಬಿಡಲಾಗಿತ್ತು. ಈಗ ಗ್ರಾಮದ ಜನರ ಮನೆ, ಮನಗಳಲ್ಲಿ ಹಬ್ಬದ ವಾತಾವರಣ ಮಾಡಿದೆ. ಇದೇ ಮೇ 7ರಿಂದ 15ರವರೆಗೆ ಜಾತ್ರೆ ನಡೆಯಲಿದೆ.

ಗ್ರಾಮ ದೇವತೆಗಳ ಜಾತ್ರೆಗಳನ್ನು ಸಾಮಾನ್ಯವಾಗಿ ಮೂರು, ಐದು ಅಥವಾ ಒಂಬತ್ತು ವರ್ಷಗಳಿಗೊಮ್ಮೆ ಆಚರಿಸಲಾಗುತ್ತದೆ. ಗ್ರಾಮದ ಮುಖಂಡರೆಲ್ಲ ಸೇರಿಕೊಂಡು ಜಾತ್ರೆ ಆಚರಿಸಲು ಮುಂದಾಗಿರುವುದು ಜನರಲ್ಲಿ ಸಂತಸ ತಂದಿದೆ. ಜಾತ್ರೆಯ ಸಂದರ್ಭದಲ್ಲಿ ಪಾಲಿಸಬೇಕಾದ ಕ್ರಮಗಳಿಗೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಗ್ರಾಮದ ಹಿರಿಯರಾದ ಗುರುನಗೌಡ ಪಾಟೀಲ್ ಹೇಳಿದರು.

ಗ್ರಾಮ ದೇವತೆ ಜಾತ್ರೆ

ಈ ಬಾರಿ ಹೊಸ ರಥ ನಿರ್ಮಾಣ ಮಾಡಲಾಗಿದ್ದು ರಥೋತ್ಸವವೂ ವಿಜೃಂಭಣೆಯಿಂದ ಜರುಗಲಿದೆ. 9 ದಿನ ನಡೆಯುವ ಜಾತ್ರೆಯ ಕಾರ್ಯಕ್ರಮಗಳಲ್ಲಿ ದಶಮಿ ದಿಂಡಿನಲ್ಲಿ ಅಮ್ಮನವರ ಮೂರ್ತಿ ಮೆರವಣಿಗೆ, ರಥೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎನ್ನುತ್ತಾರೆ ಬಸವನಗೌಡ ಪಾಟೀಲ್.

Intro:

Body:ಕೊಪ್ಪಳ:- ಆ ಗ್ರಾಮದಲ್ಲಿರುವ ಈ ಶಕ್ತಿದೇವತೆ ಊರ ಜನರ ಆರಾಧ್ಯ ದೈವ. ಆದರೆ, ಕಳೆದ 39 ವರ್ಷಗಳಿಂದ ಗ್ರಾಮದೇವತೆಯ ಜಾತ್ರೆಯನ್ನು ಆಚರಿಸಿರಲಿಲ್ಲ. ಬರೋಬ್ಬರಿ 39 ವರ್ಷಗಳ ಬಳಿಕ ಈಗ ಜಾತ್ರೆಯ ಸಡಗರ ಆ ಗ್ರಾಮದಲ್ಲಿ‌ ಮನೆ ಮಾಡಿದೆ. ಹಾಗಾದ್ರೆ ಇಷ್ಟು ವರ್ಷ ಯಾಕೆ ಜಾತ್ರೆ ಮಾಡಿರಲಿಲ್ಲ ಅನ್ನೋದರ ಕುರಿತ ಕಂಪ್ಲೀಟ್ ಸ್ಟೋರಿ ಇಲ್ಲಿದೆ ನೋಡಿ...
ಹೌದು...,,, ಕೊಪ್ಪಳ ತಾಲೂಕಿನ ಹಲಗೇರಿ ಗ್ರಾಮದಲ್ಲಿ ಈಗ ಗ್ರಾಮ ದೇವತೆ ದ್ಯಾಮಮ್ಮನ ಜಾತ್ರೆಯ ಸಡಗರ ಮನೆ ಮಾಡಿದೆ. ಕಳೆದ 39 ವರ್ಷಗಳ ಹಿಂದೆ ಹಲಗೇರಮ್ಮನ ಜಾತ್ರೆ ನಡೆದಿತ್ತು. ಅದಾದ ಬಳಿಕ ಜಾತ್ರೆ ನಡೆದಿರಲಿಲ್ಲ. ಹೀಗಾಗಿ, ಗ್ರಾಮದ ಹಿರಿಯರೆಲ್ಲರೂ ಸೇರಿಕೊಂಡು ಈ ವರ್ಷ ಜಾತ್ರೆ ಮಾಡಲು ನಿರ್ಧರಿಸಿದ್ದಾರೆ. ಹೀಗಾಗಿ, ಇದೇ ಮೇ 7 ರಿಂದ 15 ರವರೆಗೆ ಜಾತ್ರೆ ನಡೆಯಲಿದೆ. ಸಾಮಾನ್ಯವಾಗಿ ಶಕ್ತಿ ದೇವತೆಗಳ ಜಾತ್ರೆಯಲ್ಲಿ ಸಾಕಷ್ಟು ಕಟ್ಟುನಿಟ್ಟಿನ ಆಚರಣೆಗಳು ಜಾತ್ರೆಗಳ ಆಚರಣೆಗಳಲ್ಲಿ ಯಾವುದೇ ಭಂಗ ಬರದಂತೆ ನೋಡಿಕೊಳ್ಳಬೇಕು. ಅಲ್ಲದೆ ಎಲ್ಲ ಆಚರಣೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಕಟ್ಟುನಿಟ್ಟಾಗಿ ಆಚರಣೆಗಳನ್ನು ಪಾಲಿಸಲು ಆಗುವುದಿಲ್ಲ ಎಂಬ ಕಾರಣದಿಂದಾಗಿ ಹಲಗೇರಿ ಗ್ರಾಮದ ದ್ಯಾಮಮ್ಮದೇವಿ ಜಾತ್ರೆಯನ್ನು ಇಷ್ಟು ವರ್ಷ ಮಾಡಿರಲಿಲ್ಲ. 1980 ರಲ್ಲಿ ದ್ಯಾಮಮ್ಮದೇವಿ ಜಾತ್ರೆ ನಡೆದಿತ್ತು. ಗ್ರಾಮದ ದೇವತೆಗಳಾದ ದ್ಯಾಮಮ್ಮದೇವಿ, ದುರ್ಗಾದೇವಿ ಜಾತ್ರೆಗಳ ಕಟ್ಟುನಿಟ್ಟಿನ ಆಚರಣೆಗಳಲ್ಲಿ ಯಾವುದೇ ವ್ಯತ್ಯಾಸವಾಗುವಂತಿಲ್ಲ.‌ ಹೀಗಾಗಿ ಗ್ರಾಮದೇವತೆಗಳ ಜಾತ್ರೆಗಳನ್ನು ಸಾಮಾನ್ಯವಾಗಿ ಮೂರು ವರ್ಷಕ್ಕೆ ಅಥವಾ 5 ವರ್ಷ, ಅಥವಾ 7 ವರ್ಷ, ಇಲ್ಲವೆ 9 ವರ್ಷ ಹಾಗೂ 11 ವರ್ಷಕ್ಕೊಮ್ಮೆ ಮಾಡುತ್ತಾರೆ. ಆದರೆ, ನಮ್ಮೂರ ಗ್ರಾಮದೇವತೆ ದ್ಯಾಮಮ್ಮದೇವಿ ಜಾತ್ರೆಯನ್ನು 39 ವರ್ಷಗಳಿಂದ ಮಾಡಿರಲಿಲ್ಲ. ಈ ಬಾರಿ ಊರವರೆಲ್ಲಾ ಸೇರಿಕೊಂಡು ಜಾತ್ರೆ ಮಾಡಲು ನಿರ್ಧರಿಸಿದ್ದೇವೆ. ಜಾತ್ರೆಯ ಸಂದರ್ಭದಲ್ಲಿ ಮಾಡಬೇಕಾದ ಆಚರಣೆಯನ್ನು ಕಟ್ಟು ನಿಟ್ಟಾಗಿ ಪಾಲಿಸಲು ಸಿದ್ಧತೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಗುರುನಗೌಡ ಪಾಟೀಲ್ ಅವರು.

ಬೈಟ್1:-ಗುರುನಗೌಡ ಪಾಟೀಲ್, ಗ್ರಾಮದ ಹಿರಿಯರು.

ಗ್ರಾಮದಲ್ಲಿ ಗ್ರಾಮ ದೇವತೆ ಜಾತ್ರೆಯ ಸಡಗರ ಮನೆ ಮಾಡಿದೆ. ಇದೇ ಮೇ. 7 ರಿಂದ 15 ರವರೆಗೆ ಜಾತ್ರೆಯ ಕಾರ್ಯಕ್ರಮಗಳು ಜರುಗಲಿವೆ. ಈ ಬಾರಿ ಹೊಸ ರಥ ನಿರ್ಮಾಣ ಮಾಡಲಾಗಿದ್ದು ರಥೋತ್ಸವವೂ ವಿಜೃಂಭಣೆಯಿಂದ ಜರುಗಲಿದೆ. 9 ದಿನಗಳ ಕಾಲ‌ ನಡೆಯುವ ಜಾತ್ರೆಯ ಕಾರ್ಯಕ್ರಮಗಳಲ್ಲಿ ದಶಮಿ ದಿಂಡಿನಲ್ಲಿ ಅಮ್ಮನವರ ಮೂರ್ತಿ ಮೆರವಣಿಗೆ, ರಥೋತ್ಸವ ಸೇರಿದಂತೆ ಅನೇಕ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೆಗೆ ಅಗತ್ಯ ಸಿದ್ಧತೆಗಳನ್ನು‌ ಮಾಡಿಕೊಳ್ಳಲಾಗಿದೆ ಎನ್ನುತ್ತಾರೆ ಗ್ರಾಮದ ಹಿರಿಯರಾದ ಬಸವನಗೌಡ ಪಾಟೀಲ್ ಅವರು.

ಬೈಟ್2:-ಬಸವನಗೌಡ ಪಾಟೀಲ್, ಗ್ರಾಮದ ಹಿರಿಯರು

ಕಟ್ಟುನಿಟ್ಟಿನ ಆಚರಣೆಗಳನ್ನು ಪೂರೈಸಲು ಕಷ್ಟಸಾಧ್ಯ ಎಂಬ ಭಾವನೆಯಿಂದ ಕಳೆದ 39 ವರ್ಷಗಳಿಂದ ನಡೆಯದಿದ್ದ ಗ್ರಾಮ ದೇವತೆ ಜಾತ್ರೆ ಈ ವರ್ಷ ನಡೆಯುತ್ತಿರೋದು ಗ್ರಾಮಸ್ಥರ ಸಡಗರಕ್ಕೆ ಕಾರಣವಾಗಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.