ETV Bharat / state

ಕುಷ್ಟಗಿ ತಾಲೂಕಿನಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದ 21 ಕಲ್ಲು ಕ್ವಾರಿ ಮಾಲೀಕರಿಗೆ ನೋಟಿಸ್​

author img

By

Published : Nov 12, 2020, 8:21 AM IST

ಕಳೆದ ವಾರಾಂತ್ಯದಲ್ಲಿ ಕಲ್ಲು ಕ್ವಾರಿ ಗುಂಡಿಗಳಲ್ಲಿ ಬಿಸನಾಳ, ಕಲ್ಲು ಗೋನಾಳ ಗ್ರಾಮದಲ್ಲಿ ಬಾಲಕರಿಬ್ಬರ ಸರಣಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಟಿ. ಶ್ರೀಧರ ಮಾರ್ಗದರ್ಶನದಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಈ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಿದ್ದಾರೆ. ಈಗಾಗಲೇ 21 ಕಲ್ಲು ಕ್ವಾರಿ ಮಾಲೀಕರಿಗೆ ನೋಟಿಸ್​ ನೀಡಿದ್ದಾರೆ.

Notice to 21 quarry owners for not taking safety measures in Kushtagi
ಸುರಕ್ಷತೆ ಕ್ರಮವಹಿಸದ 21 ಕಲ್ಲು ಕ್ವಾರಿ ಮಾಲೀಕರಿಗೆ ನೋಟಿಸ್​

ಕುಷ್ಟಗಿ(ಕೊಪ್ಪಳ): ತಾಲೂಕಿನಲ್ಲಿ ಸುರಕ್ಷತಾ ಕ್ರಮ ಕೈಗೊಳ್ಳದ ಕಲ್ಲು ಕ್ವಾರಿ ಮಾಲೀಕರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ.

ಕಳೆದ ವಾರಾಂತ್ಯದಲ್ಲಿ ಕಲ್ಲು ಕ್ವಾರಿ ಗುಂಡಿಗಳಲ್ಲಿ ಬಿಸನಾಳ, ಕಲ್ಲು ಗೋನಾಳ ಗ್ರಾಮದಲ್ಲಿ ಬಾಲಕರಿಬ್ಬರ ಸರಣಿ ಸಾವು ಪ್ರಕರಣದ ಹಿನ್ನೆಲೆಯಲ್ಲಿ ಜಿಲ್ಲಾ ಎಸ್ಪಿ ಟಿ.ಶ್ರೀಧರ ಮಾರ್ಗದರ್ಶನ ದಲ್ಲಿ ಸಿಪಿಐ ನಿಂಗಪ್ಪ ರುದ್ರಪ್ಪಗೋಳ ಅವರು ಈ ಕಾನೂನಾತ್ಮಕ ಕ್ರಮಕ್ಕೆ ಮುಂದಾಗಿದ್ದಾರೆ.

ಕುಷ್ಟಗಿ, ತಾವರಗೇರಾ ಹಾಗೂ ಹನುಮಸಾಗರ ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಈಗಾಗಲೇ 21 ಜನರಿಗೆ ನೋಟೀಸ್ ಜಾರಿ ಮಾಡಲಾಗಿದೆ. ಹನುಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಸೇಬಿನಕಟ್ಟಿ ಸೀಮಾದಲ್ಲಿ ಬೆಂಗಳೂರು ಮೂಲದ ವಿವೇಕ್, ಕೊಪ್ಪಳದ ಸಿ.ಬಿ. ಮಹಾಂತಯ್ಯಮಠ, ಕಡೂರಿನ ಶಿವಶಂಕರಗೌಡ ಪಾಟೀಲ, ಬಾಗಲಕೋಟೆ ಜಿಲ್ಲೆ ಇಳಕಲ್ಲ ಮೂಲದ ಶಾಂತಪ್ಪ ಗುರಂ, ಶಿವಶರಣಪ್ಪ ಆಲಮೇಲ್, ಸುಭಾಸ್ ಹರಿಹರ, ಮಲ್ಲಿಕಾರ್ಜುನ ಶೆಟ್ಟರ್, ಶರಣಪ್ಪ ಗುರಂ, ಮುರ್ತುಜಾಸಾಬ್ ಕರಡಿ, ಹಿರೇಓತಗೇರಿಯ ಲಕ್ಷ್ಮಪುತ್ರ ರೇವಡಿ ವಿರುದ್ಧ ದೂರು ದಾಖಲಾಗಿದೆ.

ತಾಲೂಕಿನ ಬಿಸನಾಳ, ಕಲಕೇರಿ, ಪರಸಾಪೂರ ಹಾಗೂ ಕ್ಯಾದಿಗುಪ್ಪ ಸೀಮಾದಲ್ಲಿ ಪರಸಾಪೂರ ಗೂಡುಸಾಬ್ ವೆಂಕಟಾಪೂರ, ಇಳಕಲ್ ಹನುಮಂತಮ್ಮ ಪೊಲೀಸ್ ಪಾಟೀಲ, ದೋಟಿಹಾಳದ ಲಕ್ಷ್ಮವ್ವ ಕೊಳ್ಳಿ, ಕ್ಯಾದಿಗುಪ್ಪ ಮಲ್ಲಿಕಾರ್ಜುನ ಶೆಟ್ಟರ್, ಹನಮಂತ ತಳವಾರ, ರಾಮರಾವ್ ದೇಸಾಯಿ ವಿರುದ್ಧ ಪ್ರಕರಣ ದಾಖಲಾಗಿದ್ದು, ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳಮಳ್ಳಿ ರೇಖಪ್ಪ ರಾಠೋಡ್, ಇಳಕಲ್ ರಿಯಾನಭಾನು ಉಸ್ಮಾನ ಗಣಿ ವಿರುದ್ಧ ಪ್ರಕರಣ ದಾಖಲಾಗಿದೆ.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.