ಗಂಗಾವತಿ: ನಗರದಲ್ಲಿ ಎರಡು ಕೊರೊನಾ ಪಾಸಿಟಿವ್ ಕೇಸುಗಳು ಪತ್ತೆಯಾಗಿವೆ. ಈ ರೋಗಿಗಳು ಗಂಗಾವತಿಯ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ವಾರ್ಡುಗಳಲ್ಲಿ ದಾಖಲಿಸಲಾಗಿದ್ದು ಅವರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಇದರ ಪರಿಣಾಮ, ಆಸ್ಪತ್ರೆಗೆ ಸಾಮಾನ್ಯ ಕಾಯಿಲೆಗೆ ಟ್ರೀಟ್‌ಮೆಂಟ್ ಪಡೆಯಲು ಬರುವವರ ಸಂಖ್ಯೆ ದಿಢೀರ್ ಕುಸಿತವಾಗಿದೆ.
ಈ ಹಿಂದೆ ಇಡೀ ಆಸ್ಪತ್ರೆ ಆವರಣ ಜಾಗವಿಲ್ಲದೆ ತುಂಬಿರುತಿತ್ತು. ಆದರೀಗ ಜನರಿಲ್ಲದೇ ಬಿಕೋ ಎನ್ನುತ್ತಿದೆ. ಕೈಕಾಲು ನೋವು, ಮೈಕೈ ನೋವು, ತಲೆನೋವಿನಂತಹ ಸಾಮಾನ್ಯ ಕಾಯಿಲೆಗಳಿಗೆ ಬರುವ ರೋಗಿಗಳ ಸಂಖ್ಯೆ ಈ ಹಿಂದೆ ಹೆಚ್ಚಿತ್ತು.
ಆದರೀಗ ಹೊರ ಜಿಲ್ಲೆಗಳಿಂದ ಬರುವ ಜನರು ಮತ್ತು ಗಂಭೀರ ಸ್ವರೂಪದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರು ಮಾತ್ರ ಈ ಸರ್ಕಾರಿ ಆಸ್ಪತ್ರೆಗೆ ಕಾಲಿಡುತ್ತಿದ್ದಾರೆ. ಹೀಗಾಗಿ ಆಸ್ಪತ್ರೆಯ ವೈದ್ಯರು ಕೂಡ ಕೊಂಚ ನಿರಾಳರಾಗಿದ್ದಾರೆ.