ಗಂಗಾವತಿ: ಲಾಕ್ ಡೌನ್ ಉಲ್ಲಂಘಿಸಿ ಹಾಗೂ ಜಿಲ್ಲಾಧಿಕಾರಿ ಹೊರಡಿಸಿದ ನಿಷೇಧಾಜ್ಞೆ ಮೀರಿ ನಗರದಲ್ಲಿ ನಿತ್ಯ ರಾತ್ರಿ ನಡೆಯುತ್ತಿರುವ ಜನಜಾತ್ರೆ ಬಗ್ಗೆ ಮಾಹಿತಿ ಕಲೆ ಹಾಕಲು ಖುದ್ದು ಸಹಾಯಕ ಆಯುಕ್ತೆ ನಗರದಲ್ಲಿ ನೈಟ್ ಸಿಟಿ ರೌಂಡ್ ಹಾಕಿದ್ದಾರೆ.
ಈಟಿವಿ ಭಾರತ್ ವರದಿ ಪರಿಣಾಮ ಸಹಾಯಕ ಆಯುಕ್ತೆ ನೈಟ್ ಸಿಟಿ ರೌಂಡ್ ಹಾಕಿ ವಸ್ತುಸ್ಥಿತಿ ಪರಿಶೀಲಿಸಿದರು.
ರಾತ್ರಿ 11.30ರಿಂದ ಮಧ್ಯರಾತ್ರಿ ಎರಡು ಗಂಟೆವರೆಗೆ ಸಿಟಿ ರೌಂಡ್ ಹಾಕಿದ ಸಹಾಯಕ ಆಯುಕ್ತೆ ಸಿ.ಡಿ. ಗೀತಾ, ತರಕಾರಿ ಮಾರುಕಟ್ಟೆಗೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸುಮಾರು ನೂರಕ್ಕೂ ಹೆಚ್ಚು ವರ್ತಕರು ವಹಿವಾಟಿನಲ್ಲಿ ತೊಡಗಿರುವುದು ಕಂಡು ಬಂತು.
ಪೊಲೀಸರು ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡುತ್ತಾರೆ ಎಂಬ ಮಾಹಿತಿ ಹಿನ್ನೆಲೆ ಬಹುತೇಕ ವರ್ತಕರು ಮಧ್ಯರಾತ್ರಿಯ ವಹಿವಾಟಿನಲ್ಲಿ ಪಾಲ್ಗೊಂಡಿರಲಿಲ್ಲ. ಗಂಗಾವತಿಯಲ್ಲಿ ಮಧ್ಯರಾತ್ರಿ ವ್ಯಾಪಾರ ವಹಿವಾಟು ನಡೆಯುತ್ತಿರುವ ಬಗ್ಗೆ ಈ ಟಿವಿ ಭಾರತ ಸುದ್ದಿ ಪ್ರಕಟಿಸಿದ್ದ ಹಿನ್ನೆಲೆ ಎಸಿ ಭೇಟಿ ನೀಡಿದರು.