ETV Bharat / state

ಕೊಪ್ಪಳದ ಚರಂಡಿಯಲ್ಲಿ ನವಜಾತ ಗಂಡು ಶಿಶು ಪತ್ತೆ: ಎಸೆದವರ ಪತ್ತೆಗೆ ಪೊಲೀಸರ ಶೋಧನೆ .. - ಕೊಪ್ಪಳ ನಗರ ಪೋಲಿಸ್ ಠಾಣಾ ವ್ಯಾಪ್ತಿ

ಕೊಪ್ಪಳದ ಬೆಂಕಿ ನಗರದ ಚರಂಡಿಯಲ್ಲಿ 7 ತಿಂಗಳದ ನವಜಾತ ಗಂಡು ಶಿಶು ಪತ್ತೆಯಾಗಿದೆ.

Newborn baby boy found
ಕೊಪ್ಪಳದ ಚರಂಡಿಯಲ್ಲಿ ನವಜಾತ ಗಂಡು ಶಿಶುವನ್ನು ವೀಕ್ಷಿಸುತ್ತಿರುವ ಪತ್ಯೇಕದರ್ಶಿಗಳು
author img

By ETV Bharat Karnataka Team

Published : Oct 21, 2023, 8:21 PM IST

Updated : Oct 21, 2023, 8:30 PM IST

ಕೊಪ್ಪಳದ ಚರಂಡಿಯಲ್ಲಿ ನವಜಾತ ಗಂಡು ಶಿಶು ಪತ್ತೆ

ಕೊಪ್ಪಳ: ಕೊಪ್ಪಳದ ಬೆಂಕಿ ನಗರದ ಚರಂಡಿಯಲ್ಲಿ 7 ತಿಂಗಳದ ನವಜಾತ ಗಂಡು ಶಿಶು ಪತ್ತೆಯಾದ ಘಟನೆ ಶನಿವಾರ ನಡೆದಿದೆ. ನವಜಾತ ಶಿಶು ಬೆಳಗ್ಗೆ ಪತ್ತೆಯಾದರೂ, ಮಧ್ಯಾಹ್ನ ಬೆಳಕಿಗೆ ಬಂದಿದೆ. ಸ್ಥಳೀಯರು ಭ್ರೂಣ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ಕೊಪ್ಪಳ ಪೋಲಿಸರು, ನವಜಾತ ಗಂಡು ಶಿಶು ಎಸೆದವರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

ವರ್ಷದೊಳಗೆ 6 ನೇ ಪ್ರಕರಣ: ಕೊಪ್ಪಳ ಜಿಲ್ಲಾದ್ಯಂತ ಕಳೆದೊಂದು ವರ್ಷದಲ್ಲಿ ಒಟ್ಟು 6 ನವಜಾತ ಶಿಶುಗಳು ಪತ್ತೆಯಾಗಿವೆ. ಅದರಲ್ಲಿ ಮೂರು ನವಜಾತ ಶಿಶುಗಳು ಮೃತಪಟ್ಟಿದ್ದು, ಇನ್ನುಳಿದ ಮೂರು ಶಿಶುಗಳು ಜೀವಂತವಾಗಿ ಪತ್ತೆಯಾಗಿದ್ದವು. ಈ ಎಲ್ಲ ಶಿಶುಗಳು ಯಲಬುರ್ಗಾ ತಾಲೂಕಿನ ಬೇವೂರು, ತಾವರಗೇರ, ಗಂಗಾವತಿ ತಾಲೂಕಿನ ಮರಳಿ, ಕೊಪ್ಪಳ ಜಿಲ್ಲಾಸ್ಪತ್ರೆ ಸೇರಿದಂತೆ ಚರಂಡಿ, ಪೊದೆ, ಶೌಚಾಲಯದಲ್ಲಿ ಪತ್ತೆಯಾಗಿವೆ.

ಈ ಪ್ರಕಣಗಳೆಲ್ಲ ಮಾಸುವ ಮುನ್ನವೇ ಶನಿವಾರ ಮತ್ತೊಂದು ಅಂತಹದ್ದೇ ಪ್ರಕರಣ ಬೆಳಕಿಗೆ ಬಂದಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ. ಕೊಪ್ಪಳ ನಗರ ಪೋಲಿಸ್ ಠಾಣಾ ವ್ಯಾಪ್ತಿ ಈ ಘಟನೆ ಜರುಗಿದೆ.

ಪ್ರತ್ಯೇಕದರ್ಶಿಗಳು ಏನೂ ಅಂತಾರೆ?: ನಮ್ಮ ಮನೆ ಸ್ವಚ್ಛತೆ ಮಾಡುತ್ತಿದ್ದೆವು, ನಮ್ಮ ಮನೆ ಮುಂದಿನ ಗಟಾರದಲ್ಲಿ ನವಜಾತು ಶಿಶುವನ್ನು ಎಸೆದು ಹೋಗಿದ್ದರು. ಅದನ್ನು ಮಕ್ಕಳು ನೋಡಿಬಿಟ್ಟು ನಮಗ ಹೇಳಿದ್ರು, ಅದನ್ನು ನಾವು ನೋಡಿ, ಗಂಡು ನವಜಾತ ಶಿಶುವನ್ನು ಗಟಾರದಲ್ಲಿ ಎಸೆದಿದ್ದನ್ನೂ ತೋರಿಸಿದ ಬಳಿಕ ಅಧಿಕಾರಿಗಳಿಗೆ ಮಾಹಿತಿ ನೀಡುವಂತೆ ಸಲಹೆ ನೀಡಿದರು. ತಕ್ಷಣ ನಾವು ಮಹಿಳಾ ಹಾಗೂ ಮಕ್ಕಳ ಕಲ್ಯಾಣ ಅಧಿಕಾರಿಗಳಿಗೆ ಮಾಹಿತಿ ನೀಡಿದೆವು ಎಂದು ಪ್ರತ್ಯೇಕದರ್ಶಿ ಕೊಪ್ಪಳ ನಿವಾಸಿ ಜುನೇದ್ ತಿಳಿಸಿದ್ದಾರೆ.

ಇದನ್ನೂಓದಿ:ಚಾಮರಾಜನಗರ: ಸಾಮಾಜಿಕ ಬಹಿಷ್ಕಾರಕ್ಕೆ ನೊಂದು ವ್ಯಕ್ತಿ ಆತ್ಮಹತ್ಯೆ

ಪೊದೆಯಲ್ಲಿ ಎಸೆದಿದ್ದ ನವಜಾತ ಶಿಶು ರಕ್ಷಣೆ( ಬೆಂಗಳೂರು): ನವಜಾತ ಹೆಣ್ಣು ಶಿಶುವನ್ನು ಪೊದೆಯಲ್ಲಿ ಬಿಟ್ಟು ಹೋಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಾಡುಬ್ಯಾಡರಹಳ್ಳಿಯಲ್ಲಿ ಇತ್ತೀಚೆಗೆ ವರದಿಯಾಗಿತ್ತು. ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಶಿಶುವನ್ನು ರಕ್ಷಣೆ ಮಾಡಿ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ರವಾನಿಸಲಾಗಿತ್ತು.

ತಾಲೂಕಿನ ಕಾಡುಬ್ಯಾಡರಹಳ್ಳಿಯಲ್ಲಿ ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ಮನೆಗಳ ಸಂದಿ ಮಧ್ಯದಲ್ಲಿ ಬೆಳೆದಿದ್ದ ಹೂವಿನ ಗಿಡದ ಪೊದೆಯಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋಗಿದ್ದರು. ಈ ಶಿಶುವನ್ನು ಇರುವೆಗಳು ಮುತ್ತಿಕೊಂಡಿದ್ದವು. ಬಳಿಕ ಇರುವೆಗಳಿಂದ ರಕ್ಷಣೆ ಮಾಡಿದ ಸ್ಥಳೀಯರು ಮನೆಗೆ ತಂದು ಆರೈಕೆ ಮಾಡಿ, ನಂತರ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಮಾಹಿತಿ ನೀಡಿದ್ದರು.

ಶಿಶುವನ್ನು ಯಾರು ಎಸೆದು ಹೋಗಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಹೆಣ್ಣು ಮಗು ಎಂಬ ಕಾರಣಕ್ಕೆ ನವಜಾತ ಶಿಶುವನ್ನು ಬಿಟ್ಟು ಹೋಗಿರುವ ಶಂಕೆ ಇದೆ. ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮಗುವನ್ನು ಬೆಂಗಳೂರಿನ ವಾಣಿ ವಿಲಾಸ ಆಸ್ಪತ್ರೆಗೆ ದಾಖಲು ಮಾಡಿದ್ದು, ಸದ್ಯ ಮಗು ಆರೋಗ್ಯವಾಗಿದೆ ಎಂದು ಮಾಹಿತಿ ಸಿಕ್ಕಿತ್ತು.

Last Updated : Oct 21, 2023, 8:30 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.