ಗಂಗಾವತಿ: ನಗರದ ಎಂಎನ್ಎಂ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶಿಕ್ಷಣ ಇಲಾಖೆ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಆಧಾರಿತ ಸ್ಪರ್ಧೆಯಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ, ಕೇವಲ ಆಂಗ್ಲ ಭಾಷೆಗೆ ಆದ್ಯತೆ ನೀಡಿದ್ದಕ್ಕಾಗಿ ವಿವಾದಕ್ಕೆ ಕಾರಣವಾಯಿತು.
ಇಡೀ ಸಮಾರಂಭದ ವೇದಿಕೆಯಲ್ಲಿ ಹಾಗೂ ಬ್ಯಾನರ್ಗಳಲ್ಲಿ ಕನ್ನಡಕ್ಕೆ ಆದ್ಯತೆ ನೀಡದೆ ಕೇವಲ ಆಂಗ್ಲ ಭಾಷೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ಸಂಘಟಕರ ವಿರುದ್ಧ ಕರವೇಯ ಜಿಲ್ಲಾಧ್ಯಕ್ಷ ಪಂಪಣ್ಣ ನಾಯಕ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಶಾಸಕ ಪರಣ್ಣ ಮುನವಳ್ಳಿ, ಸಂಸದ ಕರಡಿ ಸಂಗಣ್ಣ ಅವರ ಸಮ್ಮುಖದಲ್ಲಿ ಸಂಘಟಕರನ್ನು ತರಾಟೆಗೆ ತೆಗೆದುಕೊಂಡ ಪಂಪಣ್ಣ, ಬ್ಯಾನರ್ನಲ್ಲಿ ಕನ್ನಡ ಅಕ್ಷರ ಬರೆಯಿಸುವವರೆಗೂ ಕಾರ್ಯಕ್ರಮ ಆರಂಭಿಸಲು ಬಿಡುವುದಿಲ್ಲ ಎಂದು ಪಟ್ಟು ಹಿಡಿದರು. ಬಳಿಕ ಸಂಘಟಕರು ಕನ್ನಡ ಬ್ಯಾನರ್ ತಂದು ಹಾಕಿದರು.