ಗಂಗಾವತಿ: ಆಹಾರ ಹುಡುಕಿಕೊಂಡು ಹೋಗಿದ್ದ ಎಮ್ಮೆಯೊಂದು ಆಕಸ್ಮಿಕವಾಗಿ ಆಯತಪ್ಪಿ ಚರಂಡಿಯಲ್ಲಿ ಬಿದ್ದಿದ್ದು, ನಗರ ಸಭೆ ಸಿಬ್ಬಂದಿ ಎಮ್ಮೆ ರಕ್ಷಿಸಿರುವ ಘಟನೆ ನಗರದ ವಾಲ್ಮೀಕಿ ವೃತ್ತದ ಸಮೀಪ ಇರುವ ಮುಖ್ಯ ಚರಂಡಿಯಲ್ಲಿ ನಡೆದಿದೆ.
ವಾರ್ಡ್ನ ಕಮಲಪ್ಪ ಎಂಬುವವರಿಗೆ ಸೇರಿದ ಎಮ್ಮೆ ಇದಾಗಿದ್ದು, ಚರಂಡಿಯಲ್ಲಿ ಬಿದ್ದು ನರಳಾಡುತ್ತಿತ್ತು. ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ನಗರಸಭೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಜೆಸಿಬಿಯೊಂದಿಗೆ ಆಗಮಿಸಿದ ನಗರಸಭೆ ಸಿಬ್ಬಂದಿ ಅರ್ಧ ಗಂಟೆಗೂ ಹೆಚ್ಚು ಕಾಲ ಕಾರ್ಯಾಚರಣೆ ನಡೆಸಿ, ಎಮ್ಮೆ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನು ಗಾಯಗೊಂಡ ಎಮ್ಮೆಯನ್ನು ಪಶು ಆಸ್ಪತ್ರೆಗೆ ಸಾಗಿಸಿ, ಚಿಕಿತ್ಸೆ ಕೊಡಿಸಲಾಗಿದೆ.