ETV Bharat / state

ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿವರೆಗೆ ಕೇಬಲ್ ಕಾರ್: ಸಂಸದ ಸಂಗಣ್ಣ ಕರಡಿ - ಕೇಬಲ್ ಕಾರ್

ಕೊಪ್ಪಳ ನಗರದ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಎಸ್ಕಲೇಟರ್ ಗೆ ಚಾಲನೆ ನೀಡಿದ ಸಂಸದ ಸಂಗಣ್ಣ ಕರಡಿ ಅವರು ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿವರೆಗೆ ಕೇಬಲ್ ಕಾರ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ತಿಳಿಸಿದರು.

MP Sanganna Kardi
ಸಂಸದ ಸಂಗಣ್ಣ ಕರಡಿ
author img

By

Published : Nov 28, 2022, 10:43 PM IST

ಕೊಪ್ಪಳ: ಕೊಪ್ಪಳ ನಗರದ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಎಸ್ಕಲೇಟರ್​ಅನ್ನು ಸೋಮವಾರ ಸಂಸದ ಸಂಗಣ್ಣ ಕರಡಿ ಉದ್ಘಾಟಿಸಿದರು.

ನಗರದ ರೈಲ್ವೆ ನಿಲ್ದಾಣದಲ್ಲಿ ನೂತನವಾಗಿ ನಿರ್ಮಿಸಿರುವ ಎಸ್ಕಲೇಟರ್ ಗೆ ಚಾಲನೆ ನೀಡಿ ಮಾತನಾಡಿದ ಅವರು, ಗಂಗಾವತಿ ರೈಲ್ವೆ ನಿಲ್ದಾಣದಿಂದ ಅಂಜನಾದ್ರಿವರೆಗೆ ಕೇಬಲ್ ಕಾರ್ ನಿರ್ಮಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದರು.

ದೇಶದ ಬಹುದೊಡ್ಡ ಸಾರಿಗೆ ವ್ಯವಸ್ಥೆಯಾಗಿರುವ ರೈಲ್ವೆಯನ್ನು ಬಹುಪಾಲು ಬಡವರು ಅವಲಂಬಿಸಿದ್ದಾರೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹೊಸ ಯೋಜನೆ ಬದಲು ಈಗಾಗಲೇ ಘೋಷಿಸಿದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಆದ್ಯತೆ ನೀಡಿದೆ. ನಾನು ಶಾಸಕನಾಗಿದ್ದಾಗ ಮುನಿರಾಬಾದ-ಮೆಹಬೂಬ ನಗರ ಯೋಜನೆಯನ್ನು ಆರಂಭಿಸಲಾಗಿತ್ತು.

16 ವರ್ಷಗಳು ಕಳೆದರೂ ಕಾಮಗಾರಿ ಆರಂಭವಾಗಲಿಲ್ಲ ಮತ್ತೆ ನಾನು ಸಂಸದನಾಗಿ ಆಯ್ಕೆಯಾದ ಮೇಲೆ ಚಾಲನೆ ದೊರೆಯಿತು. ಈಗ ಇನ್ನೂ ಕೆಲವೇ ದಿನಗಳಲ್ಲಿ ರೈಲು ಕಾಮಗಾರಿ ಸಿಂಧನೂರು ತಲುಪಲಿದೆ. ಗದಗ ವಾಡಿ ರೈಲು ಕಾಮಗಾರಿ ಮಾರ್ಚ್ ವೇಳೆಗೆ ಕುಷ್ಟಗಿ ತಲುಪಲಿದೆ. ಆಲಮಟ್ಟಿ ಚಿತ್ರದುರ್ಗ ಹೊಸ ಯೋಜನೆ ಜಾರಿಯಾಗಲಿದ್ದು, ಒಟ್ಟು 8455 ಕೋಟಿ ರೂ.ವೆಚ್ಚ ಆಗಲಿದೆ. ದರೋಜಿ ಗಂಗಾವತಿಯಲ್ಲಿ ಸರ್ವೇ ನಡೆಯುತ್ತಿದ್ದು ಮುಂಬರುವ ಬಜೆಟ್​ನಲ್ಲಿ ಘೋಷಣೆ ಆಗಲಿದೆ ಎಂದರು.

ಇದನ್ನೂ ಓದಿ:ಓಲಾ, ಉಬರ್​​ ಆಟೋ ಸೇವೆ ನಿರ್ಬಂಧ ಪ್ರಕರಣ: ವಿಚಾರಣೆ ಮುಂದೂಡಿದ ಹೈಕೋರ್ಟ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.