ETV Bharat / state

ಕೊಟ್ಟ ಮಾತು ಉಳಿಸಿಕೊಂಡ ಸಂಸದ: 24 ಗಂಟೆಯಲ್ಲೇ ಸೋದರಿಯರಿಗೆ ಸಿಕ್ತು ಮೊಬೈಲ್​ ಫೋನ್‌ - MP Sanganna Karadi gave mobile for online Education of Poor Sisters in Koppal

ಕೊಪ್ಪಳದ ಗಾಂಧಿ ನಗರದ ಗಿರಿಜಾ ಹಾಗೂ ಪ್ರೀತಿ ಎಂಬ ಬಡ ಕುಟುಂಬದ ಸಹೋದರಿಯರಿಗೆ ಆನ್​ಲೈನ್​ ಶಿಕ್ಷಣಕ್ಕಾಗಿ ಸಂಸದ ಸಂಗಣ್ಣ ಕರಡಿ ಎರಡು ಮೊಬೈಲ್ ಫೋನ್‌ ಕೊಡಿಸಿದ್ದಾರೆ.

MP Sanganna  Karadi gave mobile for online Education of Poor Sisters
24 ಗಂಟೆಯಲ್ಲಿಯೇ ಸೋದರಿಯರಿಗೆ ಸಿಕ್ತು ಮೊಬೈಲ್​
author img

By

Published : Jul 9, 2021, 6:10 PM IST

Updated : Jul 9, 2021, 6:50 PM IST

ಕೊಪ್ಪಳ: ಆನ್​ಲೈನ್​ ಶಿಕ್ಷಣಕ್ಕಾಗಿ ಮೊಬೈಲ್ ಇಲ್ಲದೆ ಪರದಾಡುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರಿಗೆ ನಿನ್ನೆ ನೀಡಿದ್ದ ಭರವಸೆಯಂತೆ ಸಂಸದ ಸಂಗಣ್ಣ ಕರಡಿ ಎರಡು ಮೊಬೈಲ್ ಕೊಡಿಸಿದರು.

ಇಲ್ಲಿನ ಗಾಂಧಿ ನಗರದ 8 ನೇ ತರಗತಿಯಲ್ಲಿ ಓದುತ್ತಿರುವ ಗಿರಿಜಾ ಹಾಗೂ 10 ನೇ ತರಗತಿ ಓದುತ್ತಿರುವ ಪ್ರೀತಿ ಎಂಬ ಬಡ ಕುಟುಂಬದ ಸಹೋದರಿಯರು ಆನ್‌ಲೈನ್ ಶಿಕ್ಷಣಕ್ಕಾಗಿ ಮೊಬೈಲ್ ಇಲ್ಲದೆ ಪರದಾಡುತ್ತಿದ್ದರು. ಅಲ್ಲದೇ, ಯಾರಾದರೂ ದಾನಿಗಳು ನೆರವು ನೀಡುವಂತೆ ಭಿತ್ತಿಪತ್ರ ಹಿಡಿದು ಮನವಿ ಮಾಡಿಕೊಂಡಿದ್ದರು.

ಈ ಕುರಿತು ಸುದ್ದಿ ಮಾಧ್ಯಮಗಳ ವರದಿಗಾರರ ಗಮನಕ್ಕೆ ತಂದಿದ್ದರಿಂದ ಆ ಇಬ್ಬರು ಬಾಲಕಿಯರಿಗೆ ಮೊಬೈಲ್‌ ಫೋನ್​ಗಳನ್ನು ಕೊಡಿಸುವುದಾಗಿ ಸಂಸದರು ಭರವಸೆ ನೀಡಿದ್ದರು. ನಿನ್ನೆ ನೀಡಿದ್ದ ಭರವಸೆಯಂತೆ ಸಂಸದರ ಪುತ್ರ ಹಾಗೂ ಜಿಲ್ಲಾ ಪಂಚಾಯಿತಿ ಸದಸ್ಯ ಗವಿಸಿದ್ದಪ್ಪ ಕರಡಿ ಅವರು ಎರಡು ಮೊಬೈಲ್​ಗಳನ್ನು ಆ ಇಬ್ಬರು ಸಹೋದರಿಯರಿಗೆ ತಲುಪಿಸಿದ್ದಾರೆ.

ಇದನ್ನೂ ಓದಿ: ಬಡ ಸೋದರಿಯರಿಗೆ ಮೊಬೈಲ್ ಕೊಡಿಸುವ ಭರವಸೆ ನೀಡಿದ ಸಂಸದ ಸಂಗಣ್ಣ ಕರಡಿ

Last Updated : Jul 9, 2021, 6:50 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.