ETV Bharat / state

ವಿದ್ಯುತ್​ ಸ್ಪರ್ಶಿಸಿ ವಿದ್ಯಾರ್ಥಿಗಳ ಸಾವು: ಕುಟುಂಬಸ್ಥರಿಗೆ ಶೀಘ್ರ ಪರಿಹಾರ ನೀಡಲು ಸಿಎಂ ಸೂಚನೆ

ವಿದ್ಯುತ್​ ಅವಘಡದಲ್ಲಿ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಸಿಎಂ ಘೋಷಿಸಿರುವ 5 ಲಕ್ಷ ರೂಪಾಯಿ ಪರಿಹಾರವನ್ನು ಶೀಘ್ರ ನೀಡುವಂತೆ ಜಿಲ್ಲಾಧಿಕಾರಿಗೆ ಸಿಎಂ ಸೂಚಿಸಿದ್ದಾರೆ ಎಂದು ಸಂಸದ ಸಂಗಣ್ಣ ಕರಡಿ ತಿಳಿಸಿದ್ದಾರೆ.

ಸಂಸದ ಕರಡಿ ಸಂಗಣ್ಣ
author img

By

Published : Aug 18, 2019, 5:56 PM IST

Updated : Aug 18, 2019, 6:39 PM IST

ಕೊಪ್ಪಳ: ನಗರದ ಬಿಸಿಎಂ ಹಾಸ್ಟೆಲ್​ನಲ್ಲಿ ವಿದ್ಯುತ್ ಸ್ಪರ್ಶಿಸಿ ಮೃತಪಟ್ಟ ಐವರು ವಿದ್ಯಾರ್ಥಿಗಳಿಗೆ ಸಿಎಂ ತಲಾ ₹ 5 ಲಕ್ಷ ಪರಿಹಾರ ಘೋಷಿಸಿದ್ದು, ಇಂದೇ ಪರಿಹಾರದ ಮೊತ್ತ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ತಿಳಿಸಿದರು.

ಆ. 15 ರಂದು ಧ್ವಜಾರೋಹಣ ಮಾಡಿದ್ದ ಕಂಬವನ್ನು ಇಂದು ತೆಗೆದುಕೊಂಡು ಬರಲು ಹೋದಾಗ ವಿದ್ಯಾರ್ಥಿಗಳು ವಿದ್ಯುತ್​ ಸ್ಪರ್ಶಿಸಿ ಮೃತಪಟ್ಟಿದ್ದಾರೆ. ವಿದ್ಯುತ್​ ಅವಘಡದಿಂದ ಮಕ್ಕಳ ದೇಹ ಬೆಂದು ಹೋಗಿವೆ. ಆ ಘಟನೆ ನೋಡಿದರೆ ಕರುಳು ಕಿತ್ತು ಬರುತ್ತದೆ. ಹಾಸ್ಟೆಲ್ ಕಟ್ಟಡದ ಬಳಿಯೇ 11 ಕೆವಿ ವಿದ್ಯುತ್ ಲೈನ್‌ ಇದೆ. ಘಟನೆ ಸಂಬಂಧ ಹಾಸ್ಟೆಲ್​ ಮೇಲ್ವಿಚಾರಕರನ್ನು ಬಂಧಿಸಲಾಗಿದ್ದು, ಹಾಸ್ಟೆಲ್​ ಕಟ್ಟಡ ಮಾಲೀಕ‌ ಹಾಗೂ ಜೆಸ್ಕಾಂ ಅಧಿಕಾರಿಗಳನ್ನು ತನಿಖೆ ಒಳಪಡಿಸಲಾಗುತ್ತದೆ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆ ಆಗಬೇಕೆಂದು ಸಂಸದ ಕರಡಿ ಆಗ್ರಹಿಸಿದರು.

ಸಂಸದ ಕರಡಿ ಸಂಗಣ್ಣ

ಮೂವರ ನಿರ್ಲಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಸುರಕ್ಷತೆಯ ಕ್ರಮ ಕೈಗೊಂಡಿದ್ದರೆ ಹೀಗೆ ಆಗುತ್ತಿರಲಿಲ್ಲ ಎಂದು ಸಂಸದರು ಬೇಸರ ವ್ಯಕ್ತಪಡಿಸಿದರು.

Intro:

Body:ಕೊಪ್ಪಳ:- ನಗರದ ಬಿಸಿಎಮ್ ಹಾಸ್ಟೆಲ್ ನಲ್ಲಿ ವಿದ್ಯುತ್ ಪರಿಸ್ಥಿತಿ ಐವರು ಮಕ್ಕಳು ಸಾವನ್ನಪ್ಪಿದ್ದು ಅವರ ಸಾವನ್ನು ಘಟನೆ ನೋಡಿದರೆ ಕರುಳು ಕಿತ್ತು ಬಂದಾಂತಾಗುತ್ತಿದೆ. ಘಟನೆಗೆ ಕಾರಣರಾದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಹೇಳಿದ್ದಾರೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಬಳಿಕ‌ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಧ್ವಜಾರೋಹಣದ ಕಂಬವನ್ನು ತೆಗೆಯಲು ಹೋಗಿದ್ದಾಗ ಈ ಅವಘಡ ನಡೆದು ಐವರು ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಅವರ ದೇಹಗಳು ಬೆಂದು ಹೋಗಿವೆ.‌ ವಿದ್ಯಾರ್ಥಿಗಳ‌ ಈ ಸಾವು ಘಟನೆ ಕರುಳು ಕಿತ್ತುಬರುವಂತಾಗುತ್ತಿದೆ. ಹಾಸ್ಟೆಲ್ ಕಟ್ಟಡದ ಬಳಿಯೇ 11 ಕೆವಿ ವಿದ್ಯುತ್ ಲೈನ್‌ ಇದೆ. ಈ ಘಟನೆಗೆ ಮೇಲ್ನೋಟಕ್ಕೆ ಮೂವರು ಕಾರಣರಾಗುತ್ತಾರೆ.‌ ಹಾಸ್ಟೆಲ್ ವಾರ್ಡನ್, ಹಾಸ್ಟೆಲ್ ಗೆ ಕಟ್ಟಡ ಬಾಡಿಗೆ ನೀಡಿರುವ ಕಟ್ಟಡದ ಮಾಲೀಕ‌ ಹಾಗೂ ಜೆಸ್ಕಾಂ ಅಧಿಕಾರಿ. ಅಲ್ಲಿ ಸುರಕ್ಷತೆಯ ಕ್ರಮ ಕೈಗೊಂಡಿದ್ದರೆ ಈ ಅವಘಡ ಸಂಭವಿಸುತ್ತಿರಲಿಲ್ಲ. ವಿದ್ಯಾರ್ಥಿಗಳ ಸಾವಿಗೆ ಕಾರಣವಾಗಿರುವವರ ಮೇಲೆ ಕ್ರಮವಾಗಬೇಕು ಎಂದರು. ಇನ್ನು ಘಟನೆ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಅವರು ಈಗಾಗಲೇ ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ತಲಾ 5 ಲಕ್ಷ ರುಪಾಯಿ ಘೋಷಣೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳಿಗೆ ಈಗಾಗಲೇ ನಿರ್ದೇಶನ ನೀಡಿದ್ದಾರೆ. ಇಂದು ಸಂಜೆಯೊಳಗಾಗಿ ಮೃತರ ಕುಟುಂಬಗಳಿಗೆ ಪರಿಹಾರ ಹಣದ ಚೆಕ್ ನೀಡುವಂತೆ ಸಿಎಂ‌ ಸೂಚನೆ ನೀಡಿದ್ದಾರೆ. ಇಂತಹ ಘಟನೆಗಳು ಆಗಬಾರದು ಎಂದು ಸಂಸದ ಸಂಗಣ್ಣ ಕರಡಿ ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಬೈಟ್1:- ಸಂಗಣ್ಣ ಕರಡಿ, ಸಂಸದ.

Conclusion:
Last Updated : Aug 18, 2019, 6:39 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.