ETV Bharat / state

ಕೊರೊನಾಗೆ ಬಿಜೆಪಿ ಮುಖಂಡ ಬಲಿ: ನಿಯಮ ಉಲ್ಲಂಘಿಸಿದ ಬೆಂಬಲಿಗರು-ಕುಟುಂಬಸ್ಥರು - Corona death

ಕೋವಿಡ್​ ಭೀತಿಯನ್ನೂ ಮೀರಿ ಕುಟುಂಬಸ್ಥರು ಹಾಗೂ ಬೆಂಬಲಿಗರು ಮೃತದೇಹದ ಬಳಿ ಸೇರಿದ್ದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದು ಕೋವಿಡ್ ನಿಯಮದ ಉಲ್ಲಂಘನೆಗೂ ಕಾರಣವಾಗಿದೆ.

Mourning for a leader who died from corona without taking precautionary measures
ಕೊರೊನಾದಿಂದ ಮೃತಪಟ್ಟ ನಾಯಕನಿಗಾಗಿ ಜಿಲ್ಲಾಡಳಿತದ ಆದೇಶ ಉಲ್ಲಂಘಿಸಿ ಶೋಕಾಚರಣೆ
author img

By

Published : Aug 24, 2020, 12:31 PM IST

ಗಂಗಾವತಿ (ಕೊಪ್ಪಳ): ಕೋವಿಡ್ ದೃಢವಾಗಿ ಚಿಕಿತ್ಸೆ ಪಡೆಯುತ್ತಿದ್ದ ಬಿಜೆಪಿ ಮುಖಂಡ ಕಾಮದೊಡ್ಡ ದೇವಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

ಈ ವೇಳೆ ಅಗಲಿದ ನೆಚ್ಚಿನ ನಾಯಕನಿಗೆ ಅಭಿಮಾನಿಗಳು ಹಾಗೂ ಕುಟುಂಬಸ್ಥರು ಅಂತಿಮ ನಮನ ಸಲ್ಲಿಸಿದ ಪರಿ ಮಾತ್ರ ನಿಜಕ್ಕೂ ಮನ ಮಿಡಿಯುವಂತಿತ್ತು.

ಕೋವಿಡ್​ ಭೀತಿಯನ್ನೂ ಮೀರಿ ಕುಟುಂಬಸ್ಥರು ಹಾಗೂ ಬೆಂಬಲಿಗರು ಮೃತದೇಹದ ಬಳಿ ಸೇರಿದ್ದರು. ಈ ವೇಳೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು ಒಂದೆಡೆಯಾದರೆ, ಇದು ಕೋವಿಡ್ ನಿಯಮದ ಉಲ್ಲಂಘನೆಗೂ ಕಾರಣವಾಗಿದೆ.

ಕೊರೊನಾದಿಂದ ಮೃತಪಟ್ಟ ಬಿಜೆಪಿ ಮುಖಂಡನ ಮೃತದೇಹದ ಬಳಿ ನೆರೆದ ಜನರು

ಮೃತದೇಹ ವೀಕ್ಷಣೆಗೆ ಕೆಲವೇ ಮಂದಿಗೆ ಅವಕಾಶ ನೀಡಲಾಗಿತ್ತಾದರೂ ನೂರಾರು ಮಂದಿ ಒಟ್ಟಿಗೆ ಸೇರಿದ್ದಾರೆ. ಅಲ್ಲದೆ ಕುಟುಂಬಸ್ಥರು ಮೃತದೇಹದ ಮೇಲೆಲ್ಲಾ ಬಿದ್ದು ಹೊರಳಾಡಿರುವ ಘಟನೆ ಸಹ ನಡೆದಿದೆ.

ಕೊರೊನಾ ನಿಯಮಾವಳಿಯ ಪ್ರಕಾರ ಕೊರೊನಾದಿಂದ ಮೃತಪಟ್ಟವರ ಅಂತ್ಯ ಸಂಸ್ಕಾರದ ವೇಳೆ ಅಂತರ ಕಾಪಾಡಿಕೊಳ್ಳುವುದಲ್ಲದೆ, ಮೃತದೇಹವನ್ನು ತಬ್ಬಿಕೊಳ್ಳುವುದು, ಮುಟ್ಟುವುದನ್ನು ನಿರ್ಬಂಧಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.