ಗಂಗಾವತಿ: ತಾಲೂಕಿನ ಧಾರ್ಮಿಕ ಪುಣ್ಯಕ್ಷೇತ್ರ, ಮಾಧ್ವಯತಿಗಳ ತಪೋಭೂಮಿ ಆನೆಗೊಂದಿ ಸಮೀಪದ ನವವೃಂದಾವನ ಗಡ್ಡೆಯಲ್ಲಿ ವ್ಯಾಸರಾಜ ಮಠದ ಪೀಠಾಧಿಪತಿ ವಿದ್ಯಾವಿಜಯ ತೀರ್ಥರು ಮೂಲಸಂಸ್ಥಾನ ಪೂಜೆ ನೆರವೇರಿಸಿದರು.
ವೃಂದಾವನ ಪ್ರವೇಶಿಸಿದ ಶ್ರೀಗಳು, ಮೊದಲಿಗೆ ನೈರ್ಮಲ್ಯ ಅಭಿಷೇಕ, ಸಂಸ್ಥಾನ ಪೂಜೆ, ಪಂಚಾಮೃತ ಅಭಿಷೇಕ, ಅಷ್ಟೋತ್ತರ ಪಾರಾಯಣದಂತಹ ಧಾರ್ಮಿಕ ವಿಧಿ ವಿಧಾನ ಪೂರೈಸಿದರು. ಬಳಿಕ ಭಕ್ತರಿಗೆ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಆನೆಗೊಂದಿಯ ನಂಜನಗೂಡು ರಾಘವೇಂದ್ರ ಸ್ವಾಮೀಜಿಗಳ ಶ್ರೀಮಠದ ವ್ಯವಸ್ಥಾಪಕ ಇಡಪನೂರು ಸುಮಂತ ಕುಲಕರ್ಣಿ, ಕಡಪ ಧೀರೇಂದ್ರ ಆಚಾರ್, ಕಂಬಲೂರು ಪವಮಾನ ಆಚಾರ್ಯ, ವಿಜಯೇಂದ್ರ ಆಚಾರ್ಯ, ಗುರುರಾಜ ಆಚಾರ್ಯ, ಶ್ರೀನಿವಾಸ ಆಚಾರ್ಯ ಇದ್ದರು.