ಗಂಗಾವತಿ (ಕೊಪ್ಪಳ): ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಅರವಿಂದ ಲಿಂಬಾವಳಿ ತಾಲೂಕಿನ ಪೌರಾಣಿಕ ಕ್ಷೇತ್ರವಾದ ಪಂಪಾಸರೋವರಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಲ್ಲಿನ ಕೋತಿಗಳ ಹಸಿವು ತೀರಿಸಲು ಆಹಾರ ನೀಡಲು ಮುಂದಾದರು.
ಈ ಸಂದರ್ಭದಲ್ಲಿ ಬಾಳೆಹಣ್ಣಿನ ಗೊನೆಯನ್ನು ಸಚಿವರು ಕಟ್ಟೆಯ ಮೇಲಿಡುತ್ತಿದ್ದಂತೆಯೇ ಕೋತಿಗಳು ಗುಂಪಾಗಿ ಬಂದು ಗೊನೆಯಿಂದ ಹಣ್ಣು ಕಿತ್ತಿಕೊಂಡು ತಿನ್ನುತ್ತಿದ್ದವು. ಆಗ ಕೋತಿಯೊಂದು ನೇರ ಸಚಿವ ಅರವಿಂದ ಲಿಂಬಾವಳಿ ಹೆಗಲೇರಿ ಕುಳಿತುಕೊಂಡು ಹಣ್ಣು ತಿನ್ನುತ್ತಾ ಜನರ ಗಮನ ಸೆಳೆಯಿತು.
ಬಳಿಕ ಸಚಿವ ಲಿಂಬಾವಳಿ, ಆನೆಗೊಂದಿ ಗ್ರಾಮದಲ್ಲಿರುವ ವಿಜಯನಗರದ ಅರಸರ ವಂಶಿಕರಾದ ಕೃಷ್ಣದೇವರಾಯ ಅವರ ಪುರಾತನ ಶೈಲಿಯ ಅರಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ನಿರ್ಮಾಣಕ್ಕೆ ಬಳಸಿಕೊಳ್ಳಲಾದ ತಾಂತ್ರಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಚಿವ ಲಿಂಬಾವಳಿ, ಆನೆಗೊಂದಿ ಗ್ರಾಮದಲ್ಲಿರುವ ವಿಜಯನಗರದ ಅರಸರ ವಂಶಿಕರಾದ ಕೃಷ್ಣದೇವರಾಯ ಅವರ ಪುರಾತನ ಶೈಲಿಯ ಅರಮನೆಗೆ ಭೇಟಿ ನೀಡಿ ಪರಿಶೀಲಿಸಿದರು. ನಿರ್ಮಾಣಕ್ಕೆ ಬಳಸಿಕೊಳ್ಳಲಾದ ತಾಂತ್ರಿಕತೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.