ETV Bharat / state

ಕಾರಟಗಿ - ಗಂಗಾವತಿಯ ಮೂರು ಗ್ರಾಮಗಳಲ್ಲಿ ಮೊಹರಂ ನಿಷೇಧ - Etv Bharat kannada

ಗಂಗಾವತಿ ಮತ್ತು ಕಾರಟಗಿ ತಾಲೂಕಿನ ಗ್ರಾಮಗಳಲ್ಲಿ ಸಾರ್ವಜನಿಕರು ಸೇರಿ ಮೊಹರಂ ಆಚರಣೆ ಮತ್ತು ಮೆರವಣಿಗೆ ಮಾಡದಂತೆ ತಹಸೀಲ್ದಾರರು ಆದೇಶ ಹೊರಡಿಸಿದ್ದಾರೆ.

kn_GVT_02_29_Moharam_Celebretion_Banned_in_Three_villages_vis_KAC10005
ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ
author img

By

Published : Jul 30, 2022, 7:50 AM IST

ಗಂಗಾವತಿ: ಈ ಹಿಂದೆ ಮೊಹರಂ ಹಬ್ಬದ ಸಾರ್ವಜನಿಕ ಆಚರಣೆಯ ಸಂದರ್ಭದಲ್ಲಿ ಗುಂಪು ಘರ್ಷಣೆಯಾಗಿದ್ದ ಕಾರಣವಾದ ಗಂಗಾವತಿ ಮತ್ತು ಕಾರಟಗಿಯ ಮೂರು ಗ್ರಾಮಗಳಲ್ಲಿ ಮೋಹರಂ ನಿಷೇಧಿಸಿ ತಹಸೀಲ್ದಾರ್ ಆದೇಶ ಹೊರಡಿಸಿದ್ದಾರೆ.

ಕಾರಟಗಿ ತಾಲೂಕಿನ ಸಿಂಗನಾಳ ಗ್ರಾಮದಲ್ಲಿ ಸಾರ್ವಜನಿಕ ಮೋಹರಂ ಆಚರಣೆ, ಉತ್ಸವ, ಮೆರವಣಿಗೆಯಂತ ಕಾರ್ಯಕ್ರಮ ನಿಷೇಧಿಸಿ ಕಾರಟಗಿಯ ತಹಸೀಲ್ದಾರ್ ಬಸವರಾಜ ಆದೇಶ ಹೊರಡಿಸಿದ್ದಾರೆ. ಮೋಹರಂ ಹಬ್ಬದ ಆಚರಣೆ ಸಂದರ್ಭದಲ್ಲಿ ಗಲಭೆಗೆ ಕಾರಣವಾದ ಗಂಗಾವತಿ ತಾಲೂಕಿನ ನಾಗೇನಹಳ್ಳಿ ಮತ್ತು ಆರ್ಹಾಳ ಗ್ರಾಮದಲ್ಲಿಯು ಸಹ ಮೋಹರಂ ನಿಷೇಧ ಮಾಡಿ ತಹಸೀಲ್ದಾರ್ ಯು.ನಾಗರಾಜ್ ಆದೇಶ ಹೊರಡಿಸಿದ್ದಾರೆ.

ಇನ್ನು ನಿಷೇಧಿತ ಗ್ರಾಮಗಳಲ್ಲಿ ಯಾವುದೇ ಮೋಹರಂ ಹಬ್ಬದ ಆಚರಣೆಗೆ ಅವಕಾಶ ನೀಡುವುದಿಲ್ಲ ಎಂದು ಗಂಗಾವತಿ ಉಪ ವಿಭಾಗದ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಹೇಳಿದ್ದಾರೆ.

ಇದನ್ನೂ ಓದಿ: ಸರಣಿ ಹತ್ಯೆ ಹಿನ್ನೆಲೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿಂದು ಶಾಂತಿ ಸಭೆ ಆಯೋಜನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.