ETV Bharat / state

ಸಿಎಂ ಘೋಷಿಸಿರುವ ಆರ್ಥಿಕ ಪ್ಯಾಕೇಜ್​ನಲ್ಲಿ ಹೊಸತೇನಿಲ್ಲ: ರಾಘವೇಂದ್ರ ಹಿಟ್ನಾಳ್ - ಆರ್ಥಿಕ ಪ್ಯಾಕೇಜ್​

ಕೊರೊನಾ ಎರಡನೇ‌ ಅಲೆ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಸೋಂಕು ಎಲ್ಲ ಕಡೆ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಆಕ್ಸಿಜನ್ ಕೊರತೆ, ಔಷಧಿ ಕೊರತೆಯಿಂದ ಸೋಂಕಿತರು ಪರದಾಡುತ್ತಿದ್ದಾರೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಕಿಡಿಕಾರಿದ್ದಾರೆ.

Koppal
ರಾಘವೇಂದ್ರ ಹಿಟ್ನಾಳ್
author img

By

Published : May 20, 2021, 1:46 PM IST

ಕೊಪ್ಪಳ: ಸಿಎಂ ಯಡಿಯೂರಪ್ಪ ಘೋಷಣೆ ಮಾಡಿರುವ ಆರ್ಥಿಕ ಪ್ಯಾಕೇಜ್​ನಲ್ಲಿ ಏನೂ ಹೊಸತಿಲ್ಲ. ಕಳೆದ ಬಾರಿಯ ಪ್ಯಾಕೇಜ್​ಗೆ 400 ಕೋಟಿ ಸೇರಿಸಿದ್ದಾರಷ್ಟೇ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ್ ಹೇಳಿದ್ದಾರೆ.

ಸಿಎಂ ಘೋಷಿಸಿರುವ ಆರ್ಥಿಕ ಪ್ಯಾಕೇಜ್​ನಲ್ಲಿ ಹೊಸತೇನಿಲ್ಲ: ರಾಘವೇಂದ್ರ ಹಿಟ್ನಾಳ್

ನಗರದ ಜಿಲ್ಲಾಸ್ಪತ್ರೆಯಲ್ಲಿರುವ ಕೋವಿಡ್ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೊರೊನಾ ಎರಡನೇ‌ ಅಲೆ ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರ ಸಂಪೂರ್ಣ ವಿಫಲವಾಗಿವೆ. ಸೋಂಕು ಎಲ್ಲ ಕಡೆ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಆಕ್ಸಿಜನ್ ಕೊರತೆ, ಔಷಧಿ ಕೊರತೆಯಿಂದ ಸೋಂಕಿತರು ಪರದಾಡುತ್ತಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ 110 ಟನ್ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದರೂ ಆಕ್ಸಿಜನ್ ಕೊರತೆ ಎದುರಾಗಿದೆ. ಇದರಿಂದಾಗಿ ಹೆಚ್ಚುವರಿ ಬೆಡ್ ಹಾಕಲು ಆಗುತ್ತಿಲ್ಲ. ಜಿಲ್ಲೆಯಲ್ಲಿಯೂ ಸಾವಿನ ಸಂಖ್ಯೆ ಹೆಚ್ಚಾಗಿದೆ. ಈಗ ಜನರು ದಂಗೆ ಏಳುತ್ತಾರೆ ಎಂದರಿತುಕೊಂಡು ಜಿಲ್ಲೆಯ ಬಿಜೆಪಿ ಶಾಸಕರು, ಸಂಸದರು ಆಕ್ಸಿಜನ್ ಅಲೋಕೇಷನ್ ಹೆಚ್ಚಿಸುವಂತೆ ಕೇಳಲು ಸಿಎಂ ಬಳಿ ಹೋಗಿದ್ದಾರೆ ಎಂದರು.

ಸರ್ಕಾರ ಸೋಂಕಿತರಿಗೆ ಸೂಕ್ತ ಚಿಕಿತ್ಸೆಯ ವ್ಯವಸ್ಥೆಯನ್ನು ತ್ವರಿತವಾಗಿ ಮಾಡಬೇಕು. ಜೊತೆಗೆ ಸೋಂಕು ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಸರ್ಕಾರ ಹೀಗೆ ನಿರ್ಲಕ್ಷ್ಯ ಮಾಡಿದರೆ ಉಗ್ರ ಹೋರಾಟ ಮಾಡಲಾಗುವುದು ಎಂದರು.

ಓದಿ: ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ಕೇರ್​ ಸೆಂಟರ್ ರದ್ದು ಯಾಕೆ: ಸಾ.ರಾ.ಮಹೇಶ್ ಪ್ರಶ್ನೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.