ಗಂಗಾವತಿ (ಕೊಪ್ಪಳ): ತಾಲೂಕಿನ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ 32 ಲಕ್ಷ ರೂಪಾಯಿ ಮೊತ್ತದಲ್ಲಿ ಕೈಗೊಳ್ಳಲಾಗಿರುವ ದುರಸ್ಥಿ ಕಾರ್ಯ ಅವ್ಯವಸ್ಥೆಯಿಂದ ಕೂಡಿದೆ ಎಂಬ ದೂರಿನ ಹಿನ್ನೆಲೆ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಹಳ ದಿನಗಳ ಹಿಂದೆ ಶಾಲೆಯ ಕಟ್ಟಡದ ಮೇಲ್ಭಾಗವನ್ನು ಕಿತ್ತು ಕಾಂಕ್ರೀಟ್ ಹಾಕಿ ರಿಪೇರಿ ಮಾಡಲಾಗಿತ್ತು. ಆದರೆ ಮತ್ತೆ ಆ ಭಾಗದಿಂದ ನೀರು ಸೋರುತ್ತಿರುವುದನ್ನು ಗಮನಿಸಿದ ಶಾಸಕ ಕೂಡಲೇ ದೂರವಾಣಿ ಮೂಲಕ ಜಿಲ್ಲಾ ಪಂಚಾಯ್ತಿ ಜೆಇ ಪಲ್ಲವಿ ಅವರಿಗೆ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಗುತ್ತಿಗೆದಾರರನ್ನು ಕರೆಸಿ ಎಲ್ಲಾ ದುರಸ್ಥಿ ಮಾಡಿದ ಬಳಿಕವೇ ಬಿಲ್ ಮಂಜೂರು ಮಾಡಿ ಎಂದು ತಾಕೀತು ಮಾಡಿದರು. ಇನ್ನು ದುರಸ್ಥಿ ಮಾಡುವ ವೇಳೆ ಶಾಲೆಯ ಕಿಟಕಿ, ಬಾಗಿಲು ಮುರಿದಿವೆ ಎಂದು ಶಾಲೆಯ ಪ್ರಭಾರಿ ಪ್ರಾಂಶುಪಾಲ ರಂಗಸ್ವಾಮಿ ಶಾಸಕರ ಬಳಿ ದೂರಿದರು.