ETV Bharat / state

ಮೊಟ್ಟೆ ಡೀಲ್ ಪ್ರಕರಣ ತಲೆ ತಗ್ಗಿಸುವ ವಿಚಾರ: ಅಮರೇಗೌಡ ಪಾಟೀಲ ಬಯ್ಯಾಪೂರ - shashikala jolle egg deal case

'ಸರ್ಕಾರ ಅಂಗನವಾಡಿ ಮಕ್ಕಳ ಆರೋಗ್ಯ ಹಾಗೂ ಬೆಳವಣಿಗೆ ವೃದ್ಧಿಗಾಗಿ ಮೊಟ್ಟೆಯನ್ನು ವಿತರಿಸುತ್ತಿದೆ. ಆಹಾರದಲ್ಲಿಯೂ ಅವ್ಯವಹಾರ ಮಾಡುವುದು ಖಂಡನೀಯ.'

ಸಚಿವೆ ಜೊಲ್ಲೆ ಮೊಟ್ಟೆ ಡೀಲ್ ಪ್ರಕರಣ ಜನಪ್ರತಿನಿಧಿಗಳು ತಲೆ ತಗ್ಗಿಸುವ ವಿಚಾರ
ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ
author img

By

Published : Jul 25, 2021, 9:25 PM IST

ಕುಷ್ಟಗಿ (ಕೊಪ್ಪಳ): ಮಹಿಳಾ‌ ಮತ್ತು ಮಕ್ಕಳ‌‌ ಕಲ್ಯಾಣ ಸಚಿವೆ ಶಶಿಕಲಾ ಜೊಲ್ಲೆ ಅವರ ಮೇಲಿನ ಮೊಟ್ಟೆ ಡೀಲ್ ಪ್ರಕರಣ ಸರ್ಕಾರಕ್ಕೆ ಹಾಗೂ ಜನಪ್ರತಿನಿಧಿಗಳಿಗೆ ತಲೆತಗ್ಗಿಸುವಂತಹ ಘಟನೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹೇಳಿದರು.

ಮೊಟ್ಟೆ ಡೀಲ್ ಪ್ರಕರಣ ತಲೆ ತಗ್ಗಿಸುವ ವಿಚಾರ

ನಗರದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ಈ ಪ್ರಕರಣ ಸತ್ಯವೇ ಆಗಿದ್ದಲ್ಲಿ ಅತ್ಯಂತ ಖಂಡನೀಯ. ಜನಪ್ರತಿನಿಧಿಗಳಾದವರು ಪ್ರಜೆಗಳಿಗೆ ಮಾರ್ಗದರ್ಶಕರಾಗಿರಬೇಕು. ಇಂತಹ ಪ್ರಕರಣಗಳಾದರೆ ಜನರಲ್ಲಿ ದ್ವೇಷ ಬೆಳೆಯುತ್ತದೆ ಎಂದರು.

ಅಲ್ಲದೆ, ಅಂಗನವಾಡಿ ಮಕ್ಕಳ‌ ಆರೋಗ್ಯ ಹಾಗೂ ಬೆಳವಣಿಗೆ ವೃಧ್ದಿಗೆ ಪೌಷ್ಟಿಕಯುಕ್ತ ಆಹಾರವಾಗಿ ಮೊಟ್ಟೆಯನ್ನು ಸರ್ಕಾರ ವಿತರಿಸುತ್ತಿದೆ. ಅದರಲ್ಲಿಯೂ ಸಹ ಅವ್ಯವಹಾರ ನಡೆದಿರುವುದು ಸರಿ ಅಲ್ಲ ಎಂದು ಕಿಡಿಕಾರಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.