ETV Bharat / state

ಜೂಜಾಟದ ದುಡ್ಡಿನಿಂದ ಸರ್ಕಾರ ರಚನೆ ಮಾಡುವ ದರ್ದು ನಮಗಿಲ್ಲ: ಸಚಿವ ಆರ್. ಶಂಕರ್ - ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ

’’ಇಸ್ಪೀಟ್, ಜೂಜಾಟದ ಹಡಬಿಟ್ಟಿ ದುಡ್ಡಿನಿಂದ ಬಿಜೆಪಿ ಸರ್ಕಾರ ತಂದಿದ್ದಾರೆ’’ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆ ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ಪ್ರತಿಕ್ರಿಯಿಸಿದ್ದಾರೆ.

Minister R Shankar
ಸಚಿವ ಆರ್. ಶಂಕರ್
author img

By

Published : Mar 1, 2021, 2:26 PM IST

ಕೊಪ್ಪಳ: ನಾವು ಪ್ರಮಾಣಿಕವಾಗಿ ಸರ್ಕಾರವನ್ನು ತಂದಿದ್ದೇವೆ. ಆದರೆ, ಯಾವುದೇ ಜೂಜಾಟದ ದುಡ್ಡಿನಿಂದ ಸರ್ಕಾರ ರಚನೆ ಮಾಡುವ ದರ್ದು ನಮಗಿಲ್ಲ ಎಂದು ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್ ಅವರು ಹೆಚ್​ಡಿಕೆ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.

ತೋಟಗಾರಿಕೆ ಇಲಾಖೆ ಸಚಿವ ಆರ್. ಶಂಕರ್

ಕೊಪ್ಪಳದಲ್ಲಿ ಮಾಧ್ಯಮ‌ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಇಸ್ಪೀಟ್, ಜೂಜಾಟದ ಹಡಬಿಟ್ಟಿ ದುಡ್ಡಿನಿಂದ ಬಿಜೆಪಿ ಸರ್ಕಾರ ತಂದಿದ್ದಾರೆ ಎಂಬ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ಅವರ ಹೇಳಿಕೆ ಪ್ರತಿಕ್ರಿಯಿಸಿದರು.

ರಾಜಕಾರಣ ಅಂದರೆ ಆರೋಪ ಪ್ರತ್ಯಾರೋಪಗಳು ಇದ್ದದ್ದೆ. ಆದರೆ, ನಾವು ಯಾವುದೇ ಜೂಜಾಟದ ಹಣದಿಂದ ಸರ್ಕಾರ ತಂದಿಲ್ಲ. ಆ ದರ್ದು ನಮಗೆ ಇಲ್ಲ ಎಂದರು. ಇನ್ನು ಎಚ್. ವಿಶ್ವನಾಥ ಅವರ ಕುರಿತು ಯಾವುದೇ ಪ್ರತಿಕ್ರಿಯೆ ನೀಡದ ಸಚಿವ ಆರ್. ಶಂಕರ್ ಅವರು, ನನ್ನದು ದೊಡ್ಡ ಇಲಾಖೆ. ನಾನು ತೋಟಗಾರಿಕೆ ಇಲಾಖೆಯ ಸಚಿವನಾಗಿ ಅಧಿಕಾರ ವಹಿಸಿಕೊಂಡು ಈಗಷ್ಟೇ ಕೆಲ ದಿನಗಳಾಗಿವೆ. ಇಲಾಖೆಯ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳುತ್ತಿದ್ದೇನೆ. ಆದರೆ, ತೋಟಗಾರಿಕಾ ಇಲಾಖೆಗೆ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ ಎಂದರು.

ತೋಟಗಾರಿಕಾ ಬೆಳೆಗಳಿಗೆ ಶಿಥಿಲ ಘಟಕಗಳು ಸೇರಿದಂತೆ ಅನೇಕ ಸೌಲಭ್ಯಗಳು ಬೇಕು. ಇದಕ್ಕಾಗಿ ಹೆಚ್ಚಿನ ಅನುದಾನ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ ಹೆಚ್ಚಿನ ಅನುದಾನ ಒದಗಿಸುವಂತೆ ಸಿಎಂ ಅವರಿಗೆ ಮನವಿ ಮಾಡಿದ್ದೇನೆ ಎಂದರು.

ಕುರುಬ ಸಮುದಾಯವನ್ನು ಎಸ್ಟಿಗೆ ಸೇರಿಸಬೇಕು ಎಂಬುದರ ಕುರಿತು ನನ್ನ ಮನವಿಯನ್ನು ಸಿಎಂ ಅವರಿಗೆ ನಾನು ಸಲ್ಲಿಸಿದ್ದೇನೆ. ಎಲ್ಲ ಸಮುದಾಯಗಳನ್ನು ಹೇಗೆ ತೆಗೆದುಕೊಂಡು ಹೋಗಬೇಕು ಎಂಬುದು ಸಿಎಂ ಅವರಿಗೆ ಗೊತ್ತಿದೆ. ಅದನ್ನು ಅವರು ಸಮರ್ಪಕವಾಗಿ ನಿಭಾಯಿಸುತ್ತಾರೆ. ನಾನು ಪ್ರಾಮಾಣಿಕವಾಗಿ ನಮ್ಮ ಸಮುದಾಯದ ಅಹವಾಲನ್ನು ಸಿಎಂ ಅವರಿಗೆ ಸಲ್ಲಿಸಿದ್ದೇನೆ. ಉಳಿದಂತೆ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.