ETV Bharat / state

‘ನಾನು ಯಾರಿಗೂ ದೇಶದ್ರೋಹಿ ಎಂದಿಲ್ಲ’.... ಯತ್ನಾಳಗೆ ನೋಟಿಸ್​ ನೀಡಿರೋದು ಪಕ್ಷದ ವಿಚಾರ: ಡಿವಿಎಸ್​ ಸ್ಪಷ್ಟನೆ - show cause notice to MLA Basanagowda patil

ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಲು ಪಕ್ಷದ ಶಿಸ್ತು ಸಮಿತಿ ಇದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಶೋಕಾಸ್ ನೋಟಿಸ್ ನೀಡಿರೋದು ಪಕ್ಷದ ವಿಚಾರ, ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ
author img

By

Published : Oct 5, 2019, 12:54 PM IST

ಕೊಪ್ಪಳ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್​ಗೆ ಶೋಕಾಸ್ ನೋಟಿಸ್ ನೀಡಿರೋದು ಪಕ್ಷದ ವಿಚಾರ, ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದರು.

ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ

ಗಂಗಾವತಿಯಲ್ಲಿ ಮಾತನಾಡಿದ ಸಚಿವರು, ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಲು ಪಕ್ಷದ ಶಿಸ್ತು ಸಮಿತಿ ಇದೆ. ಹೀಗಾಗಿ, ಈಗಾಗಲೇ ನೋಟಿಸ್ ನೀಡಲಾಗಿದೆ. ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳುತ್ತದೆ ಎಂದರು.

ಅನಂತಕುಮಾರ್ ನಿಧನದ ಬಳಿಕ ರಾಜ್ಯದ ಸಚಿವರು ಕೇಂದ್ರ ನಾಯಕರೊಂದಿಗೆ ಸಂಪರ್ಕ ಮಾಡುವವರಿಲ್ಲ ಎನ್ನುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ಇದಕ್ಕೆ ನಾನು ಏನು ಉತ್ತರ ಹೇಳಲಿಕ್ಕೆ ಇಷ್ಟಪಡುವುದಿಲ್ಲ. ಮೊನ್ನೆ ಅಮಿತ್ ಶಾ, ಮೋದಿ ಅವರನ್ನು ಭೇಟಿಯಾಗಿದ್ದೇನೆ. ಒಂದೇ ದಿನದಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ, ಇದೆಲ್ಲ ನಮ್ಮ ಕರ್ತವ್ಯ. ಇದರಲ್ಲಿ ಶಹಬ್ಬಾಸಗಿರಿ ತೆಗೆದುಕೊಳ್ಳುವುದು ಏನಿಲ್ಲ ಎಂದು ಹೇಳಿದರು.

ಇನ್ನು ಚಕ್ರವರ್ತಿ ಸೂಲಿಬೆಲೆಗೆ ದೇಶದ್ರೋಹಿ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿದ ಡಿವಿಎಸ್, ದೇಶಪ್ರೇಮದಲ್ಲಿ ನಮ್ಮ ಪ್ರಧಾನಿಯವರು ಹೇಗಿದ್ದಾರೆ ಎನ್ನುವುದು ನಿಮಗೆ ಗೊತ್ತಿದೆ. ದೇಶವೇ ಪ್ರಥಮ ಎನ್ನುವರು ಅವರು. 25 ಜನ ಸಂಸದರನ್ನು ತೆಗೆದುಕೊಂಡು ಹೋದರೂ ಇಲ್ಲಿಗೆ ಏನೂ ಕೊಡಲಿಲ್ಲ ಎನ್ನುವ ಮಾತು ನನಗೆ ಮನಸ್ಸಿಗೆ ನೋವಾಯಿತು. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳೀದ್ದೇನೆ. ನಾನು ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಅನವಶ್ಯಕವಾದ ಹೇಳಿಕೆಗಳು ಬಂದ ಹಿನ್ನೆಲೆಯಲ್ಲಿ ಮನಸ್ಸಿಗೆ ನೋವಾಗಿತ್ತು. ನಾನು ಚಕ್ರವರ್ತಿ ಸೂಲಿಬೆಲೆಯವರಿಗೆ ದೇಶದ್ರೋಹಿ ಎಂದು ಹೇಳಿಲ್ಲ. ನಾನು ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಹೇಳಿದ್ದೇನೆ. ನಾನು ಅವರ ಹೆಸರು ಹೇಳಿದ್ದೇನಾ? ಎಲ್ಲೋ, ಏನೋ ಆಯಿತು ಅಂದರೇ ನನಗೆ ಯಾಕೆ ಎಂದು ತಿಳಿದುಕೊಳ್ಳಬೇಕು? ನಾನು ಇದರ ಬಗ್ಗೆ ಚರ್ಚೆ ಮಾಡಲ್ಲ ಎಂದು ಸಚಿವರು ಸ್ಪಷ್ಟಪಡಿಸಿದರು.

Intro:Body:ಕೊಪ್ಪಳ:- ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಶೋಕಾಸ್ ನೋಟಿಸ್ ನೀಡಿರೋದು ಇದು ಪಕ್ಷದ ವಿಚಾರ. ಇದರ ಬಗ್ಗೆ ನಾನು ಮಾತನಾಡುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹೇಳಿದ್ದಾರೆ. ರಾಯಚೂರಿಗೆ ತೆರಳುವ ಮಾರ್ಗಮಧ್ಯದಲ್ಲಿ ಗಂಗಾವತಿ ಮಾತನಾಡಿದ ಡಿ.ವಿ. ಸದಾನಂದಗೌಡ ಅವರು,
ಪಕ್ಷಕ್ಕೆ ಮುಜುಗರ ತರುವಂತಹ ಕೆಲಸ ಮಾಡಿದರೆ ಕ್ರಮ ಕೈಗೊಳ್ಳಲು ಪಕ್ಷದ ಶಿಸ್ತು ಸಮಿತಿ ಇದೆ. ಹೀಗಾಗಿ, ಈಗಾಗಲೇ ನೋಟಿಸ್ ನೀಡಲಾಗಿದೆ. ಕಾನೂನು ತನ್ನದೇ ಕ್ರಮ ತೆಗೆದುಕೊಳ್ಳುತ್ತದೆ.ಅನಂತಕುಮಾರ್ ನಿಧನದ ಬಳಿಕ ರಾಜ್ಯದ ಸಚಿವರು ಕೇಂದ್ರ ನಾಯಕರೊಂದಿಗೆ ಸಂಪರ್ಕ ಮಾಡುವರಿಲ್ಲ ಎನ್ನುವ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಯಿಸಿದ ಅವರು, ಇದಕ್ಕೆ ನಾನು ಏನು ಉತ್ತರ ಹೇಳಲಿಕ್ಕೆ ಇಷ್ಟಪಡುವುದಿಲ್ಲ. ಮೊನ್ನೆ ಅಮಿತ್ ಶಾ, ಮೋದಿಯವರನ್ನು ಭೇಟಿಯಾಗಿದ್ದೇನೆ. ಒಂದೇ ದಿನದಲ್ಲಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದರೆ ಅರ್ಥ ಮಾಡಿಕೊಳ್ಳಿ. ಇದೆಲ್ಲ ನಮ್ಮ ಕರ್ತವ್ಯ. ಇದರಲ್ಲಿ ಶಹಬ್ಬಾಸಗಿರಿ ತೆಗೆದುಕೊಳ್ಳುವುದು ಏನಿಲ್ಲ. ಇನ್ನು ಚಕ್ರವರ್ತಿ ಸೂಲಿಬೇಲಿ ಮಾತಿಗೆ ದೇಶದ್ರೋಹಿ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಡಿವಿಎಸ್, ದೇಶ ಪ್ರೇಮದಲ್ಲಿ ನಮ್ಮ ಪ್ರಧಾನಿಯವರು ಹೇಗಿದ್ದಾರೆ ಎನ್ನುವುದು ನಿಮಗೆ ಗೊತ್ತಿದೆ. ದೇಶವೇ ಪ್ರಥಮ ಎನ್ನುವರು ಅವರು. 25 ಜನ ಸಂಸದರನ್ನು ತೆಗೆದುಕೊಂಡು ಹೋದರೂ ಇಲ್ಲಿಗೆ ಏನೂ ಕೊಡಲಿಲ್ಲ ಎನ್ನುವ ಮಾತು ನನಗೆ ಮನಸ್ಸಿಗೆ ನೋವಾಯಿತು. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ ಎಂದು ಹೇಳೀದ್ದೇನೆ. ನಾನು ಯಾರ ಹೆಸರನ್ನೂ ಉಲ್ಲೇಖ ಮಾಡಿಲ್ಲ. ಅನಾವಶ್ಯಕವಾದ ಹೇಳಿಕೆಗಳು ಬಂದ ಹಿನ್ನಲೆಯಲ್ಲಿ ಮನಸ್ಸಿಗೆ ನೋವಾಗಿತ್ತು. ನಾನು ಚಕ್ರವರ್ತಿ ಸೂಲಿಬೆಲೆಯವರಿಗೆ ದೇಶದ್ರೋಹಿ ಎಂದು ಹೇಳಿಲ್ಲ. ನಾನು ಹಾರಿಕೆ ಸುದ್ದಿ ಹರಡುವವರು ದೇಶದ್ರೋಹಿಗಳು ಎಂದು ಹೇಳಿದ್ದೇನೆ. ನಾನು ಅವರ ಹೆಸರು ಹೇಳಿದ್ದೇನಾ? ಎಲ್ಲೋ, ಏನೋ ಆಯಿತು ಅಂದರೇ ನನಗೆ ಯಾಕೆ ಎಂದು ತಿಳಿದುಕೊಳ್ಳಬೇಕು? ನಾನು ಇದರ ಬಗ್ಗೆ ಚರ್ಚೆ ಮಾಡಲ್ಲ ಎಂದು ಸಚಿವ ಡಿ.ವಿ. ಸದಾನಂದಗೌಡ ಅವರು ಸ್ಪಷ್ಟಪಡಿಸಿದರು.

ಬೈಟ್1:- ಡಿ.ವಿ. ಸದಾನಂದಗೌಡ, ಕೇಂದ್ರ ಸಚಿವConclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.