ETV Bharat / state

ಗಂಗಾವತಿ ಸರ್ಕಾರಿ ಆಸ್ಪತ್ರೆ ಯಾವುದೇ ಕಾರ್ಪೊರೇಟ್ ಸಂಸ್ಥೆಗೆ ಕಡಿಮೆ ಇಲ್ಲ : ಬಿ ಸಿ ಪಾಟೀಲ್ - ಕೃಷಿ ಸಚಿವ ಬಿ.ಸಿ. ಪಾಟೀಲ್

ಅಧಿಕಾರಿಗಳು ಮನಸ್ಸು ಮಾಡಿದರೆ ಸರ್ಕಾರಿ ಆಸ್ಪತ್ರೆ ಹಾಗೂ ಕಚೇರಿಗಳನ್ನು ಹೇಗೆ ಇಡಬಹುದು ಎಂಬುವುದಕ್ಕೆ ಗಂಗಾವತಿ ಆಸ್ಪತ್ರೆ ಒಂದು ನಿದರ್ಶನ ಹಾಗೂ ಪ್ರಶಂಸನೀಯ..

ಗಂಗಾವತಿ ನಗರದ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಬಿ.ಸಿ. ಪಾಟೀಲ್

author img

By

Published : Apr 30, 2021, 1:14 PM IST

ಗಂಗಾವತಿ : ನಗರದ ಉಪ ವಿಭಾಗ ಆಸ್ಪತ್ರೆಗೆ ಬಂದರೆ ಸರ್ಕಾರಿ ಆಸ್ಪತ್ರೆಗೆ ಬಂದಿದ್ದೇನೆ ಎನಿಸುತ್ತಿಲ್ಲ. ಬದಲಿಗೆ ಯಾವುದೋ ಕಾರ್ಪೊರೇಟ್ ಸಂಸ್ಥೆಯ ಆಸ್ಪತ್ರೆಗೆ ಬಂದಂತೆ ಭಾಸವಾಗುತ್ತಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ. ಪಾಟೀಲ್ ಹೇಳಿದರು.

ಗಂಗಾವತಿ ನಗರದ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿದ ಸಚಿವ ಬಿ.ಸಿ. ಪಾಟೀಲ್

ನಗರದ ಉಪ ವಿಭಾಗ ಆಸ್ಪತ್ರೆಗೆ ಭೇಟಿ ನೀಡಿದ್ದ ಅವರು, ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದಾಗ ಬೆಂಗಳೂರಿನ ಯಾವುದೋ ಕಾರ್ಪೊರೇಟ್ ಆಸ್ಪತ್ರೆಗೆ ಭೇಟಿ ನೀಡಿದ ಅನುಭವವಾಗುತ್ತಿದೆ. ಕಾರ್ಪೊರೇಟ್ ಆಸ್ಪತ್ರೆಗಳಿಗಿಂತ ಒಂದು ಹೆಜ್ಜೆ ಈ ಸರ್ಕಾರಿ ಆಸ್ಪತ್ರೆ ಮುಂದಿದೆ ಎಂದರು.

ಇದಕ್ಕಾಗಿ ಆಸ್ಪತ್ರೆಯ ವೈದ್ಯರು ಹಾಗೂ ಎಲ್ಲಾ ಸಿಬ್ಬಂದಿ ಅಭಿನಂದನಾರ್ಹರು. ಅಧಿಕಾರಿಗಳು ಮನಸ್ಸು ಮಾಡಿದರೆ ಸರ್ಕಾರಿ ಆಸ್ಪತ್ರೆ ಹಾಗೂ ಕಚೇರಿಗಳನ್ನು ಹೇಗೆ ಇಡಬಹುದು ಎಂಬುವುದಕ್ಕೆ ಗಂಗಾವತಿ ಆಸ್ಪತ್ರೆ ಒಂದು ನಿದರ್ಶನ ಹಾಗೂ ಪ್ರಶಂಸನೀಯ ಎಂದು ಸಚಿವರು ಶ್ಲಾಘಿಸಿದರು.

ಇದನ್ನೂ ಓದಿ : ರಾಮನಗರ ನಗರಸಭೆ ಚುನಾವಣೆ: ಭಾರೀ ಮತಗಳಿಂದ ಗೆದ್ದ ಕೋವಿಡ್​ಗೆ ಬಲಿಯಾದ ಅಭ್ಯರ್ಥಿ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.