ETV Bharat / state

ಗಂಗಾವತಿಯಲ್ಲಿ ದಿ ಕಾಶ್ಮೀರ್​ ಫೈಲ್ಸ್ ವೀಕ್ಷಿಸಿದ ಮಂತ್ರಾಲಯ ಶ್ರೀ

ನಗರದ ಪೂರ್ಣಿಮಾ (ಕನಕದುರ್ಗಾ) ಮಂದಿರದಲ್ಲಿ ಉಚಿತ ದಿ ಕಾಶ್ಮೀರ್​​​ ಫೈಲ್ಸ್ ಚಿತ್ರ ವೀಕ್ಷಣೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ವ್ಯವಸ್ಥೆ ಮಾಡಿದ್ದರು.

author img

By

Published : Mar 20, 2022, 7:47 PM IST

ದಿ ಕಾಶ್ಮೀರ್​ ಫೈಲ್ಸ್ಸ್​ ವೀಕ್ಷಣೆಗೆ ಮಹಿಳೆಯರ ನೂಕುನುಗ್ಗಲು

ಗಂಗಾವತಿ: ಇಡೀ ದೇಶಾದ್ಯಂತ ಸಂಚಲನ ಸೃಷ್ಟಿಸಿರುವ ದಿ ಕಾಶ್ಮೀರ್​ ಫೈಲ್ಸ್ ಚಿತ್ರ ವೀಕ್ಷಣೆಗೆ ನಗರದಲ್ಲಿ ಸಾವಿರಾರು ಜನ ಮುಗಿ ಬಿದ್ದ ಪರಿಣಾಮ ನೂಕುನುಗ್ಗಲು ಉಂಟಾದ ಘಟನೆ ನಡೆಯಿತು.

ನಗರದ ಪೂರ್ಣಿಮಾ (ಕನಕದುರ್ಗಾ) ಮಂದಿರದಲ್ಲಿ ಉಚಿತ ಚಿತ್ರ ವೀಕ್ಷಣೆಗೆ ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ವ್ಯವಸ್ಥೆ ಮಾಡಿದ್ದರು. ಆದರೆ, ಮಹಿಳೆಯರು ಸೇರಿದಂತೆ ಸಾವಿರಾರು ಜನ ಆಸನ ಸಿಗದೇ ಪರದಾಡಿದ ಪ್ರಸಂಗ ನಡೆಯಿತು. ಕೇವಲ ಇನ್ನೂರು ಜನರಿಗೆ ಅವಕಾಶ ಸಿಕ್ಕ ಪರಿಣಾಮ ನೂರಾರು ಜನ ನಿರಾಶೆಯಿಂದ ವಾಪಸಾದರು.

ಇದನ್ನೂ ಓದಿ: ಚರ್ಮದ ತ್ವಚೆಗೆ ಕ್ರೀಮ್​ಗಳನ್ನು ಬಳಸುತ್ತಿದ್ದೀರಾ..?: ಇಲ್ಲಿವೆ ಕೆಲವು ಸಲಹೆಗಳು

ವಿಶೇಷವಾಗಿ ಮಂತ್ರಾಲಯದ ರಾಘವೇಂದ್ರ ಮಠದ ಪೀಠಾಧಿಪತಿ ಸುಬುಧೇಂದ್ರ ಶ್ರೀಗಳು ಚಿತ್ರ ವೀಕ್ಷಣೆಗೆ ಆಗಮಿಸಿದ್ದರು. ಪೂಜೆ ಸಲ್ಲಿಸಿ ಚಿತ್ರ ವೀಕ್ಷಣೆಗೆ ಚಾಲನೆ ನೀಡಿದರು.

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.