ETV Bharat / state

ಅತ್ತ ಕೊರೊನಾ ಕಾಟ..ಇತ್ತ ಮಳೆಯೂ ಇಲ್ಲ.. ಸಂಭ್ರಮವಿಲ್ಲದ ಭೂತಾಯಿ ಮಕ್ಕಳ ಹಬ್ಬ

ರೈತಾಪಿ ವರ್ಗದ ಉಸಿರು ಎಂದರೆ ಎತ್ತುಗಳು, ಈ ಎತ್ತುಗಳಿಗೆ ಕಾರು ಹುಣ್ಣಿಮೆಯಲ್ಲಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಮಣ್ಣಿನಲ್ಲಿ ಎತ್ತುಗಳ ಸಣ್ಣ ಬೊಂಬೆಗಳನ್ನು ನಿರ್ಮಿಸಿ ಪೂಜೆ ಸಲ್ಲಿಸುವುದು ಉತ್ತರ ಕರ್ನಾಟಕದಲ್ಲಿ ರೂಢಿಯಿದೆ.

ಮಣ್ಣೆತ್ತಿನ ಅಮಾವಾಸ್ಯೆ
ಮಣ್ಣೆತ್ತಿನ ಅಮಾವಾಸ್ಯೆ
author img

By

Published : Jun 21, 2020, 8:01 AM IST

ಕುಷ್ಟಗಿ: ಮಣ್ಣೆತ್ತಿನ ಅಮವಾಸ್ಯೆ ಭೂತಾಯಿ ಮಕ್ಕಳ ಹಬ್ಬವಾಗಿದ್ದು, ಸಂಪ್ರದಾಯಕ್ಕೆ ಸೀಮಿತವಾಗುತ್ತಿರುವ ಈ ಹಬ್ಬ ಸಕಾಲಿಕವಾಗಿ ಮಳೆಯಾಗದಿರುವುದಕ್ಕೆ ಕಳೆಗುಂದಿದೆ.

ಮುಂಗಾರು ಹಂಗಾಮಿನ ಬಿತ್ತನೆ ಕೆಲಸ ಮುಗಿದು, ರೈತಾಪಿ ವರ್ಗ ಈ ಹಬ್ಬದ ಸಂಭ್ರಮದಲ್ಲಿ ಭಾಗಿಯಾಗುತ್ತಿದ್ದಂತೆ ಹಬ್ಬದ ಸಂಭ್ರಮ ಹೆಚ್ಚುತ್ತಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಮಳೆ ಸರಿಯಾಗಿ ಬೀಳುತ್ತಿಲ್ಲ. ಬಿತ್ತನೆ ಸಂದರ್ಭದಲ್ಲಿ ಈ ಹಬ್ಬ ಬಂದಿದೆ.

ಮಣ್ಣೆತ್ತಿನ ಅಮವಾಸ್ಯೆ

ಕೆಲವೆಡೆ ಮಳೆಯಾಗಿ ಉತ್ತಮ ಬೆಳೆ ಇದ್ದರೂ, ಕೊರೊನಾ ವೈರಸ್ ಹಾವಳಿ ಹೆಚ್ಚಾಗಿರುವುದರಿಂದ ಹಬ್ಬದ ಸಂಭ್ರಮ ಮಾಯವಾಗಿದೆ. ಆದರೂ ರೈತಾಪಿ ವರ್ಗ ಸಂಪ್ರದಾಯವನ್ನು ಬಿಡಲು ತಯಾರಿಲ್ಲ. ಕಷ್ಟವೆನಿಸಿದರೂ ಕೆಲವೆಡೆ ಮಣ್ಣೆತ್ತಿನ ಅಮವಾಸ್ಯೆ ಸಂಭ್ರಮ ನಡೆಯುತ್ತಿದೆ.

ಓದಿ: ಕೊಪ್ಪಳದಲ್ಲೂ ರೈತರಿಂದ ಮಣ್ಣೆತ್ತಿನ ಅಮಾವಾಸ್ಯೆ ಆಚರಣೆ..

ಮಣ್ಣೆತ್ತಿನ ಅಮವಾಸ್ಯೆಯಲ್ಲಿ ಮಣ್ಣಿನಲ್ಲಿ ಎತ್ತುಗಳನ್ನು ತಯಾರಿಸಿ ಪೂಜೆ ಸಲ್ಲಿಸಿ ಗೌರವ ಸಲ್ಲಿಸುವುದು ಉತ್ತರ ಕರ್ನಾಟಕದಲ್ಲಿರುವ ಜನಪ್ರಿಯ ವಾಡಿಕೆ

ಈ ಮಣ್ಣಿನ ಎತ್ತುಗಳನ್ನು ಕುಂಬಾರರು ತಯಾರಿಸಿ ಮಾರುವುದರಿಂದ ಈ ಕುಟುಂಬಗಳಿಗೆ ಒಂದಿಷ್ಟು ವಾರ್ಷಿಕ ಆದಾಯದ ಬರುತ್ತಿದೆ. ಜೊತೆಗೆ ಗ್ರಾಮೀಣ ಜಾನಪದ ಸಂಸ್ಕೃತಿಯ ಸೊಗಡನ್ನು ಈ ಹಬ್ಬ ಜೀವಂತವಾಗಿಸಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.