ETV Bharat / state

ಪೆಟ್ರೋಲ್ ಬಂಕ್​ನಲ್ಲಿದ್ದ ಜನರ ನಡುವೆಯೇ ಕಳ್ಳನ ಕೈಚಳಕ: ಸಿಸಿಟಿವಿ ವಿಡಿಯೋ - ಕೊಪ್ಪಳ ಕ್ರೈಂ ಕೇಸ್​

ನಗರದ ಹೊಸಪೇಟೆ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ವೊಂದರಲ್ಲಿ ನಿನ್ನೆ ಜನರ ಮಧ್ಯೆಯೇ ಕಳ್ಳನೋರ್ವ ಒಂದು ಲಕ್ಷ ರೂಪಾಯಿ ಹಣ ಎಗರಿಸಿದ್ದಾನೆ.

koppala theft case
ಕೊಪ್ಪಳ ಕಳ್ಳತನ ಪ್ರಕರಣ
author img

By

Published : Aug 13, 2021, 10:25 AM IST

ಕೊಪ್ಪಳ: ಬೈಕ್‌ನ ಸೈಡ್ ಬ್ಯಾಗ್​​ನಲ್ಲಿದ್ದ ಒಂದು ಲಕ್ಷ ರೂಪಾಯಿ ಹಣವನ್ನು ಚಾಲಾಕಿ ಕಳ್ಳನೋರ್ವ ಜನರ ಮಧ್ಯೆಯೇ ಕಳ್ಳತನ ಮಾಡಿರುವ ಘಟನೆ ಕೊಪ್ಪಳ ನಗರದಲ್ಲಿ ನಡೆದಿದೆ. ಹೊಸಪೇಟೆ ರಸ್ತೆಯಲ್ಲಿರುವ ಪೆಟ್ರೋಲ್ ಬಂಕ್‌ವೊಂದರಲ್ಲಿ ನಿನ್ನೆ ಈ ಘಟನೆ ನಡೆದಿದ್ದು, ಕಳ್ಳತನದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಕಳ್ಳತನ ಪ್ರಕರಣ - ಸಿಸಿ ಕ್ಯಾಮರಾದಲ್ಲಿ ದೃಶ್ಯ ಸೆರೆ

ಕೊಪ್ಪಳ ತಾಲೂಕಿನ ಲಾಚನಕೇರಿ ಗ್ರಾಮದ ಚನ್ನಪ್ಪ ಹನುಮನಗೌಡ ಪೊಲೀಸ್ ಪಾಟೀಲ್ ಎಂಬಾತ ಹಣ ಕಳೆದುಕೊಂಡ ವ್ಯಕ್ತಿ. ಇವರು ಒಂದು ಲಕ್ಷ ರೂಪಾಯಿ ಹಣವನ್ನು ಬೈಕ್​ನ ಸೈಡ್ ಬ್ಯಾಗ್​ನಲ್ಲಿಟ್ಟುಕೊಂಡು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದರು. ಈ ವೇಳೆ ಘಟನೆ ನಡೆದಿದೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ಮಾರ್ಕ್ಸ್ ಕಾರ್ಡ್ ದಂಧೆ ಬಯಲು: ಪಂಜಾಬ್ ಮೂಲದ ದಂಪತಿ ಅರೆಸ್ಟ್‌

ಕೊಪ್ಪಳ ನಗರ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.