ETV Bharat / state

ಚಿರತೆ ದಾಳಿಯಿಂದ ವ್ಯಕ್ತಿ ಸಾವು.. ಕುಟುಂಬಸ್ಥರಿಗೆ ಉದ್ಯೋಗದ ಭರವಸೆ ನೀಡಿದ ಶಾಸಕರು

ಈ ಘಟನೆಯ ಬಗ್ಗೆ ಅರಣ್ಯ ಸಚಿವ ಆನಂದ್ ಸಿಂಗ್ ಅವರೊಂದಿಗೆ ಮಾತನಾಡಲಾಗಿದ್ದು, ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಮೃತನ ಕುಟುಂಬಕ್ಕೆ ಕೊಡಿಸಲು ಯತ್ನಿಸಲಾಗುವುದು..

MLA Paranna Munavalli
ಶಾಸಕ ಪರಣ್ಣ ಮುನವಳ್ಳಿ
author img

By

Published : Nov 9, 2020, 8:13 PM IST

ಗಂಗಾವತಿ : ಚಿರತೆ ದಾಳಿಯಿಂದ ಇತ್ತೀಚೆಗೆ ಸಾವನ್ನಪ್ಪಿದ್ದ ಆನೆಗೊಂದಿ ಗ್ರಾಮದ ಹುಲಿಗೇಶ ಮಡ್ಡೇರ ಎಂಬ ಯುವಕನ ಮನೆಗೆ ಭೇಟಿ ನೀಡಿದ ಶಾಸಕ ಪರಣ್ಣ ಮುನವಳ್ಳಿ, ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿ ವೈಯಕ್ತಿಕ ಪರಿಹಾರ ನೀಡಿದರು.

ಬಳಿಕ ಮಾತನಾಡಿದ ಅವರು, ಅರಣ್ಯ ಇಲಾಖೆಯಿಂದ ಮೊದಲ ಹಂತದಲ್ಲಿ ಎರಡು ಲಕ್ಷ ಹಾಗೂ ಎರಡನೇ ಹಂತದಲ್ಲಿ ಐದೂವರೆ ಲಕ್ಷ ಒಟ್ಟು ಏಳೂವರೆ ಲಕ್ಷ ಮೊತ್ತದ ಹಣವನ್ನು ಈಗಾಗಲೇ ಮೃತನ ಕುಟುಂಬಕ್ಕೆ ತಲುಪಿಸಲಾಗಿದೆ.

ಈ ಘಟನೆಯ ಬಗ್ಗೆ ಅರಣ್ಯ ಸಚಿವ ಆನಂದ್ ಸಿಂಗ್ ಅವರೊಂದಿಗೆ ಮಾತನಾಡಲಾಗಿದ್ದು, ಸರ್ಕಾರದಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಮೃತನ ಕುಟುಂಬಕ್ಕೆ ಕೊಡಿಸಲು ಯತ್ನಿಸಲಾಗುವುದು.

ವನ್ಯ ಪ್ರಾಣಿಗಳು ಜನ ವಸತಿ ಪ್ರದೇಶಕ್ಕೆ ನುಗ್ಗದಂತೆ ಕ್ರಮ ಕೈಗೊಳ್ಳಲು ಈಗಾಗಲೇ ಅರಣ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.