ಕೊಪ್ಪಳ : ಗಂಗಾವತಿ ತಾಲ್ಲೂಕಿನ ಬಸವಪಟ್ಟಣ ಗ್ರಾಮದ ಯುವಕನೊಬ್ಬ ಭಾರತೀಯ ಸೇನೆಯ ಭೂಸೇನಾ ವಿಭಾಗದ ಲೆಫ್ಟಿನೆಂಟ್ ಕಮಾಂಡರ್ ಹುದ್ದೆಗೆ ನಿಯೋಜನೆಯಾದ ಬಳಿಕ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ್ದಾರೆ. ಅವರಿಗೆ ಗ್ರಾಮಸ್ಥರು ಅದ್ಧೂರಿ ಸ್ವಾಗತ ನೀಡಿದ್ದಾರೆ.
ಗ್ರಾಮದ ಬಾಲನಗೌಡ ಎಂಬುವವರು ಪುಣೆಯ ಸೈನಿಕ ಶಾಲೆಯಲ್ಲಿ ತರಬೇತಿ ಪಡೆದಿದ್ದು, ಕಳೆದ ಹಲವು ವರ್ಷದಿಂದ ಭಾರತೀಯ ಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ನಿಭಾಯಿಸುತ್ತಿದ್ದರು, ಇದೀಗ ಜಮ್ಮು-ಕಾಶ್ಮೀರದ ಭೂಸೇನೆಯ ಲೆಫ್ಟಿನೆಂಟ್ ಆಗಿ ನಿಯೋಜನೆಯಾಗಿದ್ದಾರೆ.
ಸೇನೆಯ ಉನ್ನತ ಹುದ್ದೆಗೆ ನಿಯೋಜನೆಯಾದ ಬಳಿಕ ಮೊದಲ ಬಾರಿಗೆ ಗ್ರಾಮಕ್ಕೆ ಆಗಮಿಸಿದ ಬಾಲನಗೌಡ ಅವರಿಗೆ ಗ್ರಾಮಸ್ಥರು ಅದ್ದೂರಿ ಸ್ವಾಗತ ನೀಡಿದರು. ಗ್ರಾಮದ ಪ್ರಮುಖ ರಸ್ತೆ-ವೃತ್ತಗಳಲ್ಲಿ ಮೆರವಣಿಗೆ ಮಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ: ಕೆಎಂಎಫ್ ನಂದಿನಿ ಸಿಹಿ ಉತ್ಸವಕ್ಕೆ ಚಾಲನೆ: 40 ಲಕ್ಷ ರೂ ವಹಿವಾಟು ಗುರಿ