ಕೊಪ್ಪಳ: ಗಂಗಾವತಿ ತಾಲೂಕಿನ ಅಂಜನಾದ್ರಿ ಬೆಟ್ಟದಲ್ಲಿ ಪ್ರವಾಸೋದ್ಯಮ ಇಲಾಖೆಯ 2019-20ನೇ ಸಾಲಿನಲ್ಲಿ ಒಟ್ಟು ನಾಲ್ಕುವರೆ ಕೋಟಿ ಮೊತ್ತದ ಅನುದಾನದಲ್ಲಿ ನಾನಾ ಅಗತ್ಯ ಸೌಲಭ್ಯ ಕಲ್ಪಿಸುವ ಕಾಮಗಾರಿಗಳಿಗೆ ಶಾಸಕ ಪರಣ್ಣ ಮುನವಳ್ಳಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಅಂಜನಾದ್ರಿ ಪರ್ವತಕ್ಕೆ ಆಗಮಿಸುವ ಭಕ್ತರ ಸೌಲಭ್ಯಕ್ಕೆ ಒಂದು ಕೋಟಿ ಮೊತ್ತದಲ್ಲಿ ಸ್ನಾನಗೃಹ, ಶೌಚಾಲಯ ನಿರ್ಮಾಣ, ಪಂಪ ಸರೋವರಕ್ಕೆ ರಸ್ತೆ ಸಂಪರ್ಕ ಕಲ್ಪಿಸುವ ಕಾಮಗಾರಿಗೆ 40 ಲಕ್ಷ ಹೀಗೆ ನಾನಾ ಕಾಮಗಾರಿಗೆ ಒಟ್ಟು 4.5 ಕೋಟಿ ಅನುದಾನ ಮಂಜೂರಾಗಿದೆ ಎಂದರು.
ಅಲ್ಲದೆ,ಗಂಗಾವತಿಯ ಚನ್ನಬಸವಸ್ವಾಮಿ ಮಠ ಹಾಗೂ ಮಲ್ಲಿಕಾರ್ಜುನ ದೇವಸ್ಥಾನದ ಮೂಲ ಸೌಲಭ್ಯಗಳ ವಿಸ್ತರಣೆ ಹಾಗೂ ಅಭಿವೃದ್ಧಿಗೆ 2 ಕೋಟಿ, ಆನೆಗೊಂದಿಯ ಮೇಗೋಟೆಯ ದುರ್ಗ ದೇವಸ್ಥಾನದ ಅಭಿವೃದ್ಧಿಗೆ 1.10 ಕೋಟಿ ಮೀಸಲಿಡಲಾಗಿದೆ ಎಂದರು.