ಕುಷ್ಟಗಿ (ಕೊಪ್ಪಳ): ಕೊರೊನಾ ಸೋಂಕಿತರಾಗಿ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಅವರು ಗುಣಮುಖರಾಗಿ ಶುಕ್ರವಾರ ರಾತ್ರಿ ಡಿಸ್ಚಾರ್ಜ್ ಆಗಿದ್ದಾರೆ.
ಸೆಪ್ಟಂಬರ್ 12 ರಂದು ಶಾಸಕರಿಗೆ ಕೊರೊನಾ ಸೋಂಕು ದೃಢವಾಗಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಕೊರೊನಾ ಗೆದ್ದು ಬಂದಿರುವ ಅವರು ಶುಕ್ರವಾರ ರಾತ್ರಿ 7.30ಕ್ಕೆ ಡಿಸ್ಚಾರ್ಜ್ ಆಗಿದ್ದು, ವೈದ್ಯರ ಸಲಹೆ ಮೇರೆಗೆ 10 ದಿನಗಳ ಕ್ವಾರಂಟೈನ್ ಇರಲು ಸೂಚಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಬಯ್ಯಾಪೂರ ಅವರು ಅಧಿವೇಶನದ ಬಳಿಕ ಕುಷ್ಟಗಿಗೆ ಆಗಮಿಸಲಿದ್ದಾರೆ ಎಂದು ಶಾಸಕರ ಆಪ್ತಮೂಲಗಳು ಖಚಿತಪಡಿಸಿವೆ.