ಗಂಗಾವತಿ : ತಾಲ್ಲೂಕಿನ ಶ್ರೀರಾಮನಗರದ ಯುವಕರು ಊರಿನ ವಾತಾವರಣವನ್ನು ಸುಧಾರಿಸುವ ನಿಟ್ಟಿನಲ್ಲಿ ಈ ಹಿಂದೆ ನೆಟ್ಟಿದ್ದ ಗಿಡಮರಗಳಿಗೆ ನೀರು ಹಾಕುವ ಮೂಲಕ ವಿಭಿನ್ನವಾಗಿ ಕಾರ್ಮಿಕ ದಿನಾಚರಣೆ ಆಚರಿಸಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಮೊಹಮ್ಮದ್ ರಫಿ ನೇತೃತ್ವದಲ್ಲಿ ಯುವಕರು ಕಳೆದ ಹಲವು ತಿಂಗಳಿಂದ ಪರಿಸರ ಬೆಳೆಸುವ ಕಾಯಕದಲ್ಲಿ ತೊಡಗಿದ್ದಾರೆ.

ಆದರೆ ಕಾರ್ಮಿಕ ದಿನಾಚರಣೆ ಸಂದರ್ಭದಲ್ಲಿ ನೆಟ್ಟ ಗಿಡಗಳಲ್ಲಿನ ಕಳೆ ನಿವಾರಿಸಿ, ಗೊಬ್ಬರ ಹಾಕಿ, ನೀರೆರೆದು ವಿಭಿನ್ನವಾಗಿ ಕಾರ್ಮಿಕ ದಿನಾಚರಣೆ ಆಚರಿಸಿದರು.
