ETV Bharat / state

ಈ ವೃದ್ಧೆಯ ಸ್ವಚ್ಛತಾ ಕಾರ್ಯಕ್ಕೆ ಶಹಬ್ಬಾಷ್‌ಗಿರಿ ಕೊಡಲೇಬೇಕು!

ಕುಷ್ಟಗಿ ಪೊಲೀಸ್​​ ಠಾಣೆಯಿಂದ ಸಿಂಡಿಕೇಟ್ ಬ್ಯಾಂಕ್​​ವರೆಗೂ ಅಂದಾಜು ನೂರು ಮೀಟರ್​​ವರೆಗೂ ಈ ಮುಖ್ಯರಸ್ತೆ ಸದಾ ಸ್ವಚ್ಛವಾಗಿರುತ್ತದೆ. ಅಂದಹಾಗೆ ಈ ರಸ್ತೆ ಪುರಸಭೆ ಪೌರ ಕಾರ್ಮಿಕರಿಂದ ಸ್ವಚ್ಛವಾದುದಲ್ಲ. ವೃದ್ಧೆ ಹನುಮಕ್ಕನಿಂದಾದ ಸ್ವಚ್ಛತೆ!.

kustagi old age women social work
ಈ ವೃದ್ಧೆಯ ಸ್ವಚ್ಛತಾ ಕಾರ್ಯಕ್ಕೆ ಶಹಬ್ಬಾಷ್ ಗಿರಿ ಕೊಡಲೇಬೇಕು
author img

By

Published : Oct 31, 2020, 1:26 PM IST

ಕುಷ್ಟಗಿ (ಕೊಪ್ಪಳ) : ಈಕೆಗೆ ಅಂದಾಜು 65 ರಿಂದ 70 ವಯಸ್ಸಾಗಿರಬಹುದು. ತಲೆಯ ಮೇಲೊಂದು ಸ್ವಂತದ ಸೂರು ಈಕೆಗಿಲ್ಲ. ಕಾಳಜಿಗೆ ತನ್ನವರೆಂಬ ಬಂಧುಗಳಿಲ್ಲ. ಆದ್ರೆ ಈ ವೃದ್ಧೆಯ ಸಾಮಾಜಿಕ ಕಾಳಜಿ ಮತ್ತು ನಗರ ಸ್ವಚ್ಛ ಮಾಡುವ ಕೆಲಸ ಎಲ್ಲರ ಗಮನ ಸೆಳೆದಿದೆ.

ಕುಷ್ಟಗಿ ಪೊಲೀಸ್​​ ಠಾಣೆಯಿಂದ ಸಿಂಡಿಕೇಟ್ ಬ್ಯಾಂಕ್​​ವರೆಗೂ ಅಂದಾಜು ನೂರು ಮೀಟರ್​​ವರೆಗೂ ಈ ಮುಖ್ಯ ರಸ್ತೆ ಸದಾ ಸ್ವಚ್ಛವಾಗಿರುತ್ತದೆ. ಇದು ಪುರಸಭೆ ಪೌರ ಕಾರ್ಮಿಕರಿಂದಾದ ಸ್ವಚ್ಛತೆಯಲ್ಲ. ವೃದ್ಧೆ ಹನುಮಕ್ಕನ ಕೆಲಸ.

ಈ ವೃದ್ಧೆಯ ಸ್ವಚ್ಛತಾ ಕಾರ್ಯಕ್ಕೆ ಶಹಬ್ಬಾಷ್ ಗಿರಿ ಕೊಡಲೇಬೇಕು!

ಹಲವು ವರ್ಷಗಳಿಂದ ಪೊಲೀಸ್ ಠಾಣೆಯ ಎದುರಿನ ತುರಾಯಿ ಕಾಂಪ್ಲೆಕ್ಸ್ ಈಕೆಗೆ ಮನೆಯಂತಾಗಿದೆ. ಹೊದ್ದು ಕೊಳ್ಳುವ ಹಾಸಿಗೆ ಬಟ್ಟೆ ಗಂಟಿನೊಂದಿಗೆ ಈಕೆ ಇಲ್ಲಿ ವಾಸವಾಗಿದ್ದಾಳೆ. ಹನುಮಕ್ಕ ಈ ಪ್ರದೇಶ ಬಿಟ್ಟು ಕದಲುವುದಿಲ್ಲವಂತೆ. ಈ ರಸ್ತೆಯಲ್ಲಿನ ಅಂಗಡಿಗಳ ಪ್ರದೇಶದಲ್ಲಿ ಕಸ ಬೀಳುತ್ತಿದ್ದಂತೆ ಅದನ್ನೆತ್ತಿಕೊಂಡು ಒಂದೆಡೆ ಸಂಗ್ರಹಿಸಿ ಬೆಂಕಿ ಹಚ್ಚುವುದು ಈಕೆಯ ನಿತ್ಯದ ಕಾಯಕ.

ದಿನವೂ ಹಗಲು ರಾತ್ರಿ, ಚಳಿ, ಮಳೆ, ಬಿಸಿಲು ಲೆಕ್ಕಿಸದೇ ಜವಾಬ್ದಾರಿ ಎನ್ನುವಂತೆ ಸದ್ದಿಲ್ಲದೆ ಈ ಸೇವೆ ಸಲ್ಲಿಸುತ್ತಿದ್ದಾಳೆ. ಈಕೆಯ ಕಸ ಹೆಕ್ಕುವ ಕಾಯಕಕ್ಕೆ ಅಂಗಡಿ ಮಾಲೀಕರು ಉಪಾಹಾರ, ಊಟ, ಚಹಾ ನೀಡಿ ಉಪಚರಿಸುತ್ತಿದ್ದಾರೆ. ಠಾಣೆಯ ಪೊಲೀಸ್ ಮಹಾಂತೇಶ ಚಿಟ್ಟಿ ಸೀರೆ, ರವಿಕೆ ನೀಡುತ್ತಾರಂತೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.