ETV Bharat / state

ಕುಷ್ಟಗಿ: 51ನೇ ಬಾರಿ ರಕ್ತದಾನ ಮಾಡಿದ ಶೇಖ್ ಇನಾಯತ್

author img

By

Published : Jul 3, 2020, 4:23 PM IST

ಖಾಸಗಿ ವಾಹನ ಚಾಲಕರಾಗಿರುವ ಶೇಖ್ ಇನಾಯತ್ ಅವರು ರಕ್ತದಾನ ಶಿಬಿರಗಳಲ್ಲಿ ಸ್ವಯಂಪ್ರೇರಿತರಾಗಿ ಭಾಗವಹಿಸಿ 51ನೇ ಬಾರಿ ರಕ್ತದಾನ ಮಾಡಿದರು.

51ನೇ ಬಾರಿ ರಕ್ತದಾನ ಮಾಡಿದ ಶೇಖ್ ಇನಾಯತ್
51ನೇ ಬಾರಿ ರಕ್ತದಾನ ಮಾಡಿದ ಶೇಖ್ ಇನಾಯತ್

ಕುಷ್ಟಗಿ (ಕೊಪ್ಪಳ): ಕುಷ್ಟಗಿಯ ವಾಸವಿ ನಗರದ ಕನ್ನಿಕಾ ಪರಮೇಶ್ವರಿ ದೇವಸ್ಥಾನದಲ್ಲಿ ಶುಕ್ರವಾರ ಶ್ರೀ ವಾಸವಿ ಯುವ ಜನಸಂಘ, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಸಹಯೋಗದಲ್ಲಿ ಆಯೋಜಿಸಿದ್ದ ರಕ್ತದಾನ ಹಾಗೂ ನೇತ್ರದಾನ ಅಭಿಯಾನ ಶಿಬಿರದಲ್ಲಿ ಕುಷ್ಟಗಿಯ ಶೇಖ್ ಇನಾಯತ್ ಕಾಯಿಗಡ್ಡಿ ಅವರು 51ನೇ ಬಾರಿ ರಕ್ತದಾನ ಮಾಡಿ ಗಮನ ಸೆಳೆದರು.

51ನೇ ಬಾರಿ ರಕ್ತದಾನ ಮಾಡಿದ ಶೇಖ್ ಇನಾಯತ್
51ನೇ ಬಾರಿ ರಕ್ತದಾನ ಮಾಡಿದ ಶೇಖ್ ಇನಾಯತ್

ಖಾಸಗಿ ವಾಹನ ಚಾಲಕನಾಗಿರುವ ಶೇಖ್ ಇನಾಯತ್ ರಕ್ತದಾನ ಶಿಬಿರಗಳಲ್ಲಿ ಸ್ವಯಂಪ್ರೇರಿತರಾಗಿ ರಕ್ತದಾನ ಮಾಡುತ್ತಾ ಬಂದಿದ್ದಾರೆ. ಅಗತ್ಯವೆನಿಸಿದ ಸಂದರ್ಭದಲ್ಲಿ ರಕ್ತದಾನ ಮಾಡಿ ಜೀವ ಉಳಿಸುವ ಇವರ ಸಾಮಾಜಿಕ ಕಳಕಳಿಗೆ ಮೆಚ್ಚುಗೆ ವ್ಯಕ್ತವಾಗಿದೆ.

ಈ ಶಿಬಿರದಲ್ಲಿ ಸರ್ಕಾರಿ ಆಸ್ಪತ್ರೆಯ ಹಿರಿಯ ವೈದ್ಯಾಧಿಕಾರಿ ಡಾ. ಕೆ.ಎಸ್. ರೆಡ್ಡಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಡಾ. ಮಲ್ಲಪ್ಪ ಪಿ., ಸೇರಿದಂತೆ ಯುವಕರು, ಮಹಿಳೆಯರು, ವಿದ್ಯಾರ್ಥಿಗಳು ರಕ್ತದಾನ ಮಾಡಿದರು. ಇದೇ ವೇಳೆ 5 ಜನ ಮರಣಾನಂತರ ನೇತ್ರದಾನ ಪತ್ರಕ್ಕೆ ಸಹಿ ಹಾಕಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.