ಕುಷ್ಟಗಿ(ಕೊಪ್ಪಳ): ಯುಪಿಎಸ್ಸಿ ಪರೀಕ್ಷೆಯಲ್ಲಿ 646ನೇ ರ‍್ಯಾಂಕ್ ಗಳಿಸಿದ ಕುಷ್ಟಗಿ ತಾಲೂಕಿನ ಕಂದಕೂರು ರಮೇಶ ಗುಮಗೇರಿ ಕುಷ್ಟಗಿ ತಾಲೂಕಿನ ಹೆಮ್ಮೆ ಎನಿಸಿದ್ದು, ಈ ದಿನ ಸ್ಮರಣೀಯ ದಿನವಾಗಿದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ಯಾಪೂರ ಹರ್ಷ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈಟಿವಿ ಭಾರತ ಪ್ರತಿನಿಧಿಯೊಂದಿಗೆ ಮಾತನಾಡಿದ ಅವರು, ರಮೇಶ ಗುಮಗೇರಿ ಅವರು ವಿದ್ಯೆ ಯಾರ ಸ್ವತ್ತು ಅಲ್ಲ ಎಂಬುದನ್ನು ನಿರೂಪಿಸಿದ್ದಾರೆ. ಹಿಂದುಳಿದ ವರ್ಗದಲ್ಲಿ ಜನಿಸಿದರೂ, ಸತತ ಪರಿಶ್ರಮದ ಹಿನ್ನೆಲೆಯಲ್ಲೂ ಬಡತನದಲ್ಲಿ ಅರಳಿದ ಪ್ರತಿಭಾನ್ವಿತ. ಕೊಪ್ಪಳ ಜಿಲ್ಲೆಯ ಇತಿಹಾಸದಲ್ಲಿ ಈ ದಿನ ಅತ್ಯಂತ ಸ್ಮರಣನೀಯ, ಸಂತಸದ ದಿನವಾಗಿದೆ ಎಂದರು.
ರಮೇಶ ಗುಮಗೇರಿ ಸಾಧನೆಯಲ್ಲಿ ತಮ್ಮನ ಪರಿಶ್ರಮ ಇದೆ ಎಂದು ತಿಳಿದು ಸಂತೋಷವಾಗಿದೆ. ರಮೇಶ ಗುಮಗೇರಿ ನನ್ನ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯ ಯುವ ಸಾಧಕ ಎನ್ನುವ ಹೆಮ್ಮೆ ನನಗಾಗಿದೆ ಎಂದರು.