ETV Bharat / state

ತಾವು ಕಲಿತ ಸರ್ಕಾರಿ ಶಾಲೆಗೆ ಮಗನನ್ನು ದಾಖಲಿಸಿದ ಕುಷ್ಟಗಿ ಮಾಜಿ ಶಾಸಕ

ನಾನು ಸಹ ಸರ್ಕಾರಿ ಶಾಲೆಯ ವಿದ್ಯಾರ್ಥಿ. ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ನೋಂದಾಯಿಸಿರುವುದಕ್ಕೆ ಹೆಮ್ಮೆ ಇದೆ ಎಂದು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ ತಿಳಿಸಿದ್ದಾರೆ.

kushtagi-former-mla-son-admission-to-govt-school
ಸರ್ಕಾರಿ ಶಾಲೆಗೆ ಮಗನನ್ನು‌ ಸೇರಿಸಿದ ಮಾಜಿ ಶಾಸಕ
author img

By

Published : Nov 17, 2021, 8:12 PM IST

ಕುಷ್ಟಗಿ(ಕೊಪ್ಪಳ): ಕುಷ್ಟಗಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್ (Former MLA Doddanagowda Patil) ಅವರು ತಾವು ಕಲಿತ ಶಾಲೆಗೆ ತಮ್ಮ ಮಗನನ್ನೂ ಸೇರಿಸುವ ಮೂಲಕ ಮಾದರಿಯಾಗಿದ್ದಾರೆ.

ಸ್ವಗ್ರಾಮ ಕೊರಡಕೇರಾದ ಸರ್ಕಾರಿ ಶಾಲೆಯಲ್ಲಿ (Koradakera Govt School) ಅವರ ಪುತ್ರ ಹನುಮಗೌಡ ಪಾಟೀಲ್ ಅವರನ್ನು ಸರಸ್ವತಿ ಪೂಜೆ ನೆರವೇರಿಸಿ 1ನೇ ತರಗತಿಗೆ ಸೇರಿಸಿದರು.

kushtagi-former-mla-son-admission-to-govt-school

ಈ ಕುರಿತು ಮಾತನಾಡಿದ ಅವರು, 'ನಮಗೆ ಇಬ್ಬರು ಪುತ್ರರು, ಓರ್ವ ಪುತ್ರಿ ಇದ್ದು, ಮೊದಲ ಮಗ ಹನುಮಗೌಡ ಪಾಟೀಲ್​ಗೆ 6 ವರ್ಷ ತುಂಬಿದ್ದರಿಂದ 1ನೇ ತರಗತಿಗೆ ದಾಖಲಿಸಲಾಗಿದೆ. ಮುಂದೆ ಇನ್ನಿಬ್ಬರು ಮಕ್ಕಳನ್ನೂ ಸರ್ಕಾರಿ ಶಾಲೆಗೆ ದಾಖಲಿಸುವೆ' ಎಂದರು.

'ನಾನು ಸಹ ಸರ್ಕಾರಿ ಶಾಲೆಯ ವಿದ್ಯಾರ್ಥಿ. ನಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ನೋಂದಾಯಿಸಿರುವುದಕ್ಕೆ ಹೆಮ್ಮೆ ಇದೆ. ಸರ್ಕಾರಿ ಶಾಲೆಗಳಿಗೆ‌‌ ಮೆರಿಟ್ ಆಧಾರದ ಮೇಲೆ ಶಿಕ್ಷಕರು ನೇಮಕಗೊಂಡಿದ್ದು, ಗುಣಮಟ್ಟದ ಶಿಕ್ಷಣ ನಿರೀಕ್ಷಿಸಿಸಲು ಸಾಧ್ಯವಿದೆ. ಗ್ರಾಮೀಣ ಪ್ರದೇಶದ ಶಾಲೆಗಳ ಗ್ರಾಮದ ಮಕ್ಕಳೊಂದಿಗೆ ಬೆರೆಯುವುದರಿಂದ ಮಾನವೀಯ ಮೌಲ್ಯಗಳ‌ ಕಲಿಕೆ ಸಾಧ್ಯವಾಗಲಿದೆ' ಎಂದು ತಿಳಿಸಿದರು.

ಬಿಇಓ ಪ್ರತಿಕ್ರಿಯೆ:

ಈ ಕುರಿತು ಬಿಇಓ ಚನ್ನಬಸಪ್ಪ ಮಗ್ಗದ್ ಪ್ರತಿಕ್ರಿಯಿಸಿ, ಕೊರೊನಾ ಬಳಿಕ ಬಹುತೇಕ ಪಾಲಕರು ಸರ್ಕಾರಿ ಶಾಲೆಯತ್ತ ಮುಖ‌ ಮಾಡುತ್ತಿರುವುದು ಆರೋಗ್ಯಕರ ಬೆಳವಣಿಗೆ. ಸರ್ಕಾರಿ ಶಾಲೆಯ ಶೈಕ್ಷಣಿಕ ಗುಣಮಟ್ಟ ಜನರಿಗೆ ಮನವರಿಕೆಯಾಗಿದೆ. ಈ‌ ಪರಿಸ್ಥಿತಿಯಲ್ಲಿ ಕುಷ್ಟಗಿಯ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ್​ ತಮ್ಮ ಮಗನನ್ನು ಸರ್ಕಾರಿ ಶಾಲೆಗೆ ನೋಂದಾಯಿಸಿರುವುದು ಸಂತಸದ ಸಂಗತಿ ಎಂದು ಹೇಳಿದರು.

ಇದನ್ನೂ ಓದಿ: ಆನೇಕಲ್​ನ ಅಪಾರ್ಟ್​ಮೆಂಟ್​ನಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿ.. ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.