ಕುಷ್ಟಗಿ (ಕೊಪ್ಪಳ): ಮಹಾರಾಷ್ಟ್ರಕ್ಕೆ ಹೊಟ್ಟೆ ಪಾಡಿಗೆ ವಲಸೆ ಹೋಗಿದ್ದ ಕುಷ್ಟಗಿ ತಾಲೂಕಿನ ವಿವಿಧ ಗ್ರಾಮಗಳ ಕೂಲಿಕಾರರು ಗುರುವಾರ ತಮ್ಮ ಸ್ಥಳಕ್ಕೆ ವಾಪಸಾಗಿದ್ದು ಎಲ್ಲರನ್ನೂ ಕ್ವಾರಂಟೈನ್ನಲ್ಲಿಡಲು ಸೂಚಿಸಲಾಗಿದೆ.
ಮಹಾರಾಷ್ಟ್ರದಿಂದ ಸುಮಾರು 29 ಮಂದಿ ಇರುವ ಕೂಲಿಕಾರರ ಗುಂಪು, ನಿಪ್ಪಾಣಿ ಮೂಲಕ ಕುಷ್ಟಗಿ ಪಟ್ಟಣಕ್ಕೆ ಆಗಮಿಸದೆ ನೇರವಾಗಿ ಸ್ವಗ್ರಾಮ ವೆಂಕಟಾಪುರ ಗ್ರಾಮಕ್ಕೆ ತೆರಳಿದ್ದರು. ಇವೆರೆಲ್ಲರೂ ಮಹಾರಾಷ್ಟ್ರದಿಂದ ಬಂದಿದ್ದಾರೆ ಎಂದು ತಿಳಿದು ಕೂಡಲೇ ಗ್ರಾಮಲೆಕ್ಕಾಧಿಕಾರಿ ವೇಲಪ್ಪನ್ ಹಾಗೂ ಪಿಡಿಓ, ಇವರೆಲ್ಲರನ್ನೂ ಕುಷ್ಟಗಿ ಸರ್ಕಾರಿ ಆಸ್ಪತ್ರೆಗೆ ಕರೆತಂದಿದ್ದಾರೆ. ನಂತರ ಥರ್ಮಲ್ ಸ್ಕ್ರೀನಿಂಗ್ ನಡೆಸಿ ಕುಷ್ಟಗಿ ಪಟ್ಟಣದ ಮೆಟ್ರಿಕ್ ಪೂರ್ವ ವಸತಿ ನಿಲಯದ ಕ್ವಾರಂಟೈನ್ನಲ್ಲಿರಲು ಸೂಚಿಸಲಾಗಿದೆ. ಈ 29 ಮಂದಿ ಸೇರಿದಂತೆ ಮಾಲಗಿತ್ತಿ, ಟಕ್ಕಳಕಿ, ಹನುಮಸಾಗರ, ಚಳಗೇರಾಗೆ ಸೇರಿದ ತಲಾ ಇಬ್ಬರು, ಗುಜರಾತ್, ಮಹಾರಾಷ್ಟ್ರ ರಾಜ್ಯಗಳಿಂದ ಬಂದ ಒಟ್ಟು 37 ಮಂದಿ ಕುಷ್ಟಗಿಯಲ್ಲಿ ಕ್ವಾರಂಟೈನ್ನಲ್ಲಿದ್ದಾರೆ.