ಕೊಪ್ಪಳ : ಕೊರೊನಾ ಭೀತಿಯಿಂದಾಗಿ ಲಾಕ್‌ಡೌನ್ ಆಗಿದ್ರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸುತ್ತಿದ್ದರೂ ನಗರದಲ್ಲಿ ಜನ ಗುಂಪು ಗುಂಪಾಗಿ ಸೇರುವುದು ಮುಂದುವರೆದಿದೆ. ಲಾಕ್‌ಡೌನ್ ಹಿನ್ನೆಲೆಯಲ್ಲಿ ಪಡಿತರ ವಿತರಣೆ ಕೇಂದ್ರದ ಮುಂದೆ ಜನ ಇಂದು ಪಡಿತರ ಧಾನ್ಯ ಪಡೆಯಲು ಮುಗಿಬಿದ್ದಿದ್ದರು. ಭಾಗ್ಯನಗರ ಪಟ್ಟಣದ ಒಂದನೇ ವಾರ್ಡ್ನಲ್ಲಿರುವ ಪಡಿತರ ವಿತರಣಾ ಕೇಂದ್ರದ ಮುಂದೆ ಪಡಿತರ ಪಡೆಯಲು ಜನ ಬೆಳಗ್ಗೆಯಿಂದಲೇ ಮುಗಿಬಿದ್ದಿದ್ದಾರೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಅಲ್ಲಿ ಕರ್ತವ್ಯಕ್ಕೆ ನಿಯೋಜಿತವಾಗಿರುವ ಗೃಹರಕ್ಷಕ ಸಿಬ್ಬಂದಿ ಹೇಳಿದರೂ ಅವರ ಮಾತಿಗೆ ಜನ ಕ್ಯಾರೇ ಎನ್ನುತ್ತಿಲ್ಲ. ಏಪ್ರಿಲ್ ಹಾಗೂ ಮೇ ಸೇರಿ ಒಟ್ಟು ಎರಡು ತಿಂಗಳ ಪಡಿತರ ಧಾನ್ಯವನ್ನು ವಿತರಿಸಲಾಗುತ್ತಿದೆ.