ETV Bharat / state

ಕೋವಿಡ್​ ಭೀತಿ: ಹೊಲಗಳಿಗೆ ಶಿಫ್ಟ್ ಆದ ಗ್ರಾಮಸ್ಥರು! - koppala latest news

ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ಸೋಂಕು ಉಲ್ಭಣಗೊಳ್ಳುತ್ತಿದೆ. ಸೋಂಕು ತಗುಲುವ ಭೀತಿಯಿಂದ ಗ್ರಾಮಸ್ಥರು ತಮ್ಮ ಹೊಲಗಳಿಗೆ ಶಿಫ್ಟ್​ ಆಗಿ ವಾಸಿಸುತ್ತಿದ್ದಾರೆ.

koppala villagers staying in their fields to avoid corona
ಹೊಲಗಳಿಗೆ ಶಿಫ್ಟ್ ಆಗಿ ವಾಸ ಮಾಡಲಾರಂಭಿದ ಗ್ರಾಮಸ್ಥರು
author img

By

Published : May 22, 2021, 10:02 AM IST

Updated : May 22, 2021, 11:06 AM IST

ಕೊಪ್ಪಳ: ಕೊರೊನಾ ಸೋಂಕು ವ್ಯಾಪಕವಾಗಿ ಹರಡಿ ಗ್ರಾಮೀಣ ಪ್ರದೇಶಕ್ಕೂ ಲಗ್ಗೆಯಿಟ್ಟಿದೆ. ಸೋಂಕು ಹರಡುತ್ತಿರುವ ಭೀತಿಯಿಂದ ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕೆಲ ಕುಟುಂಬಗಳ ಜನರು ಊರಲ್ಲಿನ ಮನೆಗಳಿಂದ ತಮ್ಮ ಹೊಲಗಳಿಗೆ ಶಿಫ್ಟ್ ಆಗಿ ವಾಸ ಮಾಡಲಾರಂಭಿಸಿದ್ದಾರೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿಯೂ ಸೋಂಕು ಹರಡುವಿಕೆ ಹೆಚ್ಚಾಗಿದೆ. ಇದರಿಂದಾಗಿ ಗ್ರಾಮೀಣ ಭಾಗದಲ್ಲಿನ ಕೆಲವರು ಸೋಂಕಿನ ಭೀತಿಯಿಂದ ಊರಿನಿಂದ ತಮ್ಮ ತಮ್ಮ ಹೊಲಗಳಿಗೆ ಶಿಫ್ಟ್ ಆಗಿ ವಾಸ ಮಾಡಲಾರಂಭಿಸಿದ್ದಾರೆ.

ಕೊಪ್ಪಳ ತಾಲೂಕಿನ ಹಿರೇಬೊಮ್ಮನಾಳ ಗ್ರಾಮ ಸೇರಿದಂತೆ ಜಿಲ್ಲೆಯ ಅನೇಕ ಗ್ರಾಮಗಳಲ್ಲಿನ ಜನರು ಕುಟುಂಬ ಸಮೇತ ಹೊಲದಲ್ಲಿನ ಜೋಪಡಿ, ಪಂಪ್ ಸೆಟ್ ಮನೆಗಳಲ್ಲಿ ವಾಸ ಮಾಡಲು ಶಿಫ್ಟ್ ಆಗುತ್ತಿದ್ದಾರೆ‌. ಬೊಮ್ಮನಾಳ ಗ್ರಾಮದಲ್ಲಿ ಈಗ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕು ಹರಡಿರುವುದರಿಂದ, ಒಂದು ವಾರದ ಹಿಂದಿನಿಂದ ಸುಮಾರು 20ಕ್ಕೂ ಹೆಚ್ಚು ಕುಟುಂಬಗಳು ಹೊಲದಲ್ಲಿ ವಾಸಿಸುತ್ತಿವೆ. ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ತೆಗೆದುಕೊಂಡು ಹೋಗಿ ಅಲ್ಲಿಯೇ ಅಡುಗೆ ಮಾಡಿಕೊಂಡು ಊಟ ಮಾಡಿ, ಅಲ್ಲಿಯೇ ವಾಸಿಸುತ್ತಿದ್ದಾರೆ.

ಹೊಲಗಳಿಗೆ ಶಿಫ್ಟ್ ಆಗಿ ವಾಸ ಮಾಡಲಾರಂಭಿದ ಗ್ರಾಮಸ್ಥರು

ಗ್ರಾಮದಲ್ಲಿ ಕೊರೊನಾ ಸೋಂಕು ಹರಡಿರುವುದರಿಂದ ಭಯವಾಗುತ್ತದೆ. ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರವಿದ್ದರೂ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಹೀಗಾಗಿ ಊರಲ್ಲಿರುವ ಮನೆಯಲ್ಲಿರೋದು ಬೇಡ ಎಂದು ಕುಟುಂಬ ಸಮೇತರಾಗಿ ಬಂದು ಒಂದು ವಾರದಿಂದ ಹೊಲದಲ್ಲಿ ವಾಸಿಸುತ್ತಿದ್ದೇವೆ ಎನ್ನುತ್ತಾರೆ ಬೊಮ್ಮನಾಳ ಗ್ರಾಮದ ರತ್ನಮ್ಮ ಹಾಗೂ ಮಹಾದೇವಿ.

ಇದನ್ನೂ ಓದಿ: ಗಣಿ ಜಿಲ್ಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಮಳೆ ಸಾಧ್ಯತೆ

ಇನ್ನು ಕೆಲ ಗ್ರಾಮಗಳಲ್ಲಿ ಜನರು ಬೆಳಗ್ಗೆಯೇ ಹೊಲಕ್ಕೆ ತೆರಳಿ ಸಂಜೆ ವಾಪಸ್ ಬರುತ್ತಿದ್ದಾರೆ.‌ ಕೊರೊನಾ ಭೀತಿ ಇರುವುದರಿಂದ ಊರಲ್ಲಿ ಇರೋದು ಕಡಿಮೆ. ಕುಟುಂಬ ಸಮೇತರಾಗಿ ಬೆಳಗ್ಗೆಯೇ ಹೊಲಗಳಿಗೆ ತೆರಳಿ ಸಂಜೆ ವಾಪಸ್ ಬರುತ್ತಿದ್ದಾರೆ. ಈ ಮೂಲಕ ಜನರ ಸಂಪರ್ಕದಿಂದ ಅಂತರ ಕಾಯ್ದುಕೊಳ್ಳುತ್ತಿರೋದು ಕಂಡು ಬರುತ್ತಿದೆ.

Last Updated : May 22, 2021, 11:06 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.