ಕೊಪ್ಪಳ: ನಗರದ ಅಗ್ನಿಶಾಮಕ ಠಾಣೆಯ ಠಾಣಾಧಿಕಾರಿ ಜಿ. ಕೃಷ್ಣೋಜಿರಾವ್ ಭೋಸ್ಲೆ ಅವರಿಗೆ ರಾಷ್ಟ್ರಪತಿ ಪದಕ ಲಭಿಸಿದೆ.
ಮೂಲತಃ ಹೊಸಪೇಟೆ ತಾಲೂಕಿನ ಕಾರಿಗನೂರಿನವರಾದ ಕೃಷ್ಣೋಜಿರಾವ್ ಭೋಸ್ಲೆ ಅವರು 1992ರಲ್ಲಿ ಅಗ್ನಿಶಾಮಕ ಇಲಾಖೆಯಲ್ಲಿ ನೇಮಕಗೊಂಡು ಪ್ರಸ್ತುತ ಕೊಪ್ಪಳ ನಗರದಲ್ಲಿ ಅಗ್ನಿಶಾಮಕ ಠಾಣೆಯಲ್ಲಿ ಠಾಣಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಅವರು ತಮ್ಮ ಈ ಸೇವಾ ಅವಧಿಯಲ್ಲಿ ಸುಮಾರು 18ಕ್ಕೂ ಹೆಚ್ಚು ದುರಂತ ಪ್ರಕರಣಗಳಲ್ಲಿ ತಮ್ಮ ಜೀವದ ಹಂಗು ತೊರೆದು ಅನೇಕ ಜನರ ಪ್ರಾಣ ಉಳಿಸಿದ್ದಾರೆ. ಅವರ ಈ ಸೇವೆಗೆ ಸಿಎಂ ಪದಕ ಒಲಿದು ಬಂದಿತ್ತು. ಈಗ ಮತ್ತೆ ಕೃಷ್ಟೋಜಿರಾವ್ ಅವರು 2020-21 ನೇ ಸಾಲಿನ ರಾಷ್ಟ್ರಪತಿ ಪದಕಕ್ಕೆ ಭಾಜನರಾಗಿದ್ದಾರೆ.