ಗಂಗಾವತಿ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದಿದ್ದ ಕೋಮು ಘರ್ಷಣೆ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳ ಕರ್ತವ್ಯ ಲೋಪವೇ ಕಾರಣ ಎಂದು ಆರೋಪಿ ಪೊಲೀಸ್ ಇಲಾಖೆಯ ನಾಲ್ವರು ಅಧಿಕಾರಿಗಳನ್ನ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.
ಕೊಪ್ಪಳ ಜಿಲ್ಲಾ ಎಸ್ಪಿ ಅರುಣಾಂಗ್ಶು ಗಿರಿ ಅವರ ಸೂಚನೆ ಮೆರೆಗೆ ಪ್ರಕರಣದ ತನಿಖೆ ಜವಾಬ್ದಾರಿ ಹೊತ್ತ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ಸಲ್ಲಿಸಿದ ವರದಿ ಆಧರಿಸಿ ಇಲಾಖೆಯ ಮೇಲಾಧಿಕಾರಿಗಳು ಕನಕಗಿರಿ ಪೊಲೀಸ್ ಠಾಣೆಯ ಪಿಐ ಪರಸಪ್ಪ ಭಜಂತ್ರಿ, ಎಎಸ್ಐ ಮಂಜುನಾಥ ಹಾಗೂ ಪೇದೆಗಳಾದ ಹನುಮಂತಪ್ಪ ಮತ್ತು ಸಂಗಪ್ಪ ಮೇಟಿ ಮೇಲೆ ಶಿಸ್ತು ಕ್ರಮ ಭಾಗವಾಗಿ ಕರ್ತವ್ಯದಿಂದ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಇದನ್ನೂ ಓದಿ: ಹುಲಿಹೈದರ ಪ್ರಕರಣಕ್ಕೆ ಶಾಸಕ, ಪೊಲೀಸರೇ ಹೊಣೆ: ಕೆಪಿಸಿಸಿ ವಕ್ತಾರ ಮುಕುಂದರಾವ್
ಘಟನೆಯ ಹಿನ್ನೆಲೆ: ಕ್ಷುಲ್ಲಕ ಕಾರಣಕ್ಕಾಗಿ ಆಗಸ್ಟ್ 11 ರಂದು ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ಗುಂಪು ಘರ್ಷಣೆ ನಡೆದಿತ್ತು. ಭಾಷಾವಲಿ ಹಾಗೂ ಯಂಕಪ್ಪ ಎಂಬ ಇಬ್ಬರು ಮೃತಪಟ್ಟಿದ್ದರು. ಧರ್ಮರಾಜ ಹರಿಜನ ಎಂಬ ಯುವಕ ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳದ ಹುಲಿಹೈದರ ಪ್ರಕರಣ: 40ಕ್ಕೂ ಹೆಚ್ಚು ಮಂದಿ ಬಂಧನ