ಕೊಪ್ಪಳ: ಇಲ್ಲಿನ ಹಾಲವರ್ತಿ ಗ್ರಾಮದ ಐತಿಹಾಸಿಕ ಶ್ರೀ ಜಡೇಶ್ವರ ಜಾತ್ರಾ ಮಹೋತ್ಸವ ಫೆ. 27ರಿಂದ 29ರವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ಹನುಮಂತಪ್ಪ ಕೌದಿ ಹೇಳಿದರು.
ನಗರದ ಮೀಡಿಯಾ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಗಿನೆಲೆ ಮಹಾಸಂಸ್ಥಾನದ ಕನಕಗುರು ಪೀಠ ತಿಂಥಣಿ ಬ್ರಿಡ್ಜ್ ಶಾಖಾ ಮಠವಾಗಿರುವ ಹಾಲವರ್ತಿ ಗ್ರಾಮದ ಶ್ರೀ ಜಡೇಶ್ವರ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ನಡೆಯಲಿದೆ. ಫೆ. 27ರಂದು ಕುಂಭ ಮಹೋತ್ಸವ, 28ರಂದು ಬೆಳಗ್ಗೆ ಸಾಮೂಹಿಕ ವಿವಾಹ ಮತ್ತು ಸಂಜೆ 5 ಗಂಟೆಗೆ ಮಹಾರಥೋತ್ಸವ ಹಾಗೂ ಫೆ. 29ರಂದು ಸಿಡಿಮದ್ದು ಕಾರ್ಯಕ್ರಮ ನಡೆಯಲಿದೆ ಎಂದರು.
ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು, ಕನಕಗುರು ಪೀಠ ತಿಂಥಣಿ ಬ್ರಿಜ್ನ ಶ್ರೀ ಸಿದ್ಧರಾಮನಂದಪುರಿ ಮಹಾಸ್ವಾಮಿಗಳು ಸೇರಿದಂತೆ ಅನೇಕ ಮಠಾಧೀಶರು, ಜನಪ್ರತಿನಿಧಿಗಳು ಹಾಗೂ ಮುಖಂಡರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.