ETV Bharat / state

ಅಂಜನಾದ್ರಿ ದೇವಸ್ಥಾನದ ಸಿಇಒ ಮುಂದುವರಿಕೆಗೆ ಡಿಸಿ ಒಲವು - Koppal DC P Sunil Kumara

ತಾಲೂಕಿ ವಿವಿಧ ದೇಗುಲಗಳಲ್ಲಿ ಅಭಿವೃದ್ಧಿ ಹಾಗೂ ಆದಾಯ ಸಂಗ್ರಹಣೆಯಲ್ಲಿ ಸುಧಾರಣೆಗಳನ್ನು ತಂದಿರುವ ಗಂಗಾವತಿಯ ಅಂಜನಾದ್ರಿ ದೇಗುಲದ ಸಿಇಒ ಸಿ.ಎಸ್. ಚಂದ್ರಮೌಳಿ ಅವರನ್ನು ವಯೋನಿವೃತ್ತಿಯ ಬಳಿಕವೂ ಸೇವೆಯಲ್ಲಿ ಮುಂದುವರೆಸಬೇಕೆಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

Koppal DC favors the continuation of the CEO of Anjanadri Temple
ಅಂಜನಾದ್ರಿ ದೇವಸ್ಥಾನದ ಸಿಇಒ ಮುಂದುವರಿಕೆಗೆ ಡಿಸಿ ಒಲವು
author img

By

Published : Jun 14, 2020, 8:01 AM IST

ಗಂಗಾವತಿ : ತಾಲೂಕಿನ ಪ್ರಮುಖ ಧಾರ್ಮಿಕ ತಾಣ ಅಂಜನಾದ್ರಿ ದೇವಸ್ಥಾನದ ಮುಖ್ಯಕಾರ್ಯನಿರ್ವಹಣಾಧಿಕಾರಿ ಸಿ.ಎಸ್. ಚಂದ್ರಮೌಳಿ, ಜೂನ್ ತಿಂಗಳಲ್ಲಿ ವಯೋ ನಿವೃತ್ತಿಯಾಗಲಿದ್ದಾರೆ. ಆದರೆ ಅವರ ಸೇವೆಯನ್ನು ಮುಂದುವರೆಸಬೇಕೆಂದು ಜಿಲ್ಲಾಧಿಕಾರಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.

ಸರ್ಕಾರಕ್ಕೆ ಪತ್ರ ಬರೆದಿರುವ ಡಿಸಿ ಪಿ.ಸುನಿಲ್ ಕುಮಾರ್, ಅಂಜನಾದ್ರಿ ಮಾತ್ರವಲ್ಲದೆ ಕನಕಗಿರಿಯ ಕನಕಾಚಲ ದೇಗುಲದ ಅಭಿವೃದ್ಧಿ ಹಾಗೂ ಆದಾಯ ಸಂಗ್ರಹಣೆಯಲ್ಲಿ ಸುಧಾರಣೆ ತರಲು ಚಂದ್ರಮೌಳಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಉಲ್ಲೇಖಿಸಿದ್ದಾರೆ.

Koppal DC favors the continuation of the CEO of Anjanadri Temple
ಸರ್ಕಾರಕ್ಕೆ ಪತ್ರ ಬರೆದ ಜಿಲ್ಲಾಧಿಕಾರಿ

ಹುಲಿಗೆಮ್ಮ ಸೇರಿದಂತೆ ವಿವಿಧ ದೇಗುಲಗಳ ಆಡಳಿತಾಧಿಕಾರಿಯಾಗಿದ್ದ ಚಂದ್ರಮೌಳಿ, ಸುಮಾರು ಒಂಭತ್ತು ಕೋಟಿ ರೂ. ಆದಾಯವನ್ನು ಸರ್ಕಾರಕ್ಕೆ ತಂದು ಕೊಟ್ಟಿದ್ದಾರೆ. ಹೀಗಾಗಿ ಜೂನ್ ತಿಂಗಳಲ್ಲಿ ವಯೋ ನಿವೃತ್ತಿಯಾಗಲಿರುವ ಅವರನ್ನು ದೇಗುಲದ ಸಮಿತಿಗಳ ವೆಚ್ಚದ ಷರತ್ತಿಗೆ ಒಳಪಟ್ಟು ವಿಶೇಷ ಅಧಿಕಾರಿಯನ್ನಾಗಿ ನಿಯೋಜಿಸಬೇಕು ಎಂದು ಮನವಿ ಮಾಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.