ETV Bharat / state

ಅಕ್ರಮದ ಬಗ್ಗೆ ದಾಖಲೆ ಇಟ್ಟು ಮಾತನಾಡಿ: ಶಾಸಕ ಪರಣ್ಣ ಮುನವಳ್ಳಿ - ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ

ಕ್ಷೇತ್ರದಲ್ಲಿ ನನ್ನ ಬೆಂಬಲಿಗರು ಅಕ್ರಮ ನಡೆಸಿದ್ದಾರೆ ಎಂದು ಸುಮ್ಮನೆ ಆರೋಪಿಸಲಾಗುತ್ತಿದೆ ಎಂದು ಗಂಗಾವತಿ ಶಾಸಕ ಪರಣ್ಣ ಮುನವಳ್ಳಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

DSDSD
ಶಾಸಕ ಪರಣ್ಣ ಮುನವಳ್ಳಿ
author img

By

Published : Aug 1, 2020, 11:45 AM IST

ಗಂಗಾವತಿ: ಕ್ಷೇತ್ರದಲ್ಲಿ ಬಿಜೆಪಿ ಹಾಗೂ ನನ್ನ ಬೆಂಬಲಿಗರು ಅಕ್ರಮದಲ್ಲಿ ತೊಡಗಿದ್ದಾರೆ ಎಂದು ಆರೋಪ ಮಾಡಿದರೆ ಸಾಲದು. ಅಧಿಕೃತ ದಾಖಲೆ ಕೊಡಿ. ಬಳಿಕ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆಯೋ ಇಲ್ಲವೋ ಕಾದು ನೋಡಿ ಎಂದು ಶಾಸಕ ಪರಣ್ಣ ಮುನವಳ್ಳಿ ಹೇಳಿದ್ದಾರೆ.

ಶಾಸಕ ಪರಣ್ಣ ಮುನವಳ್ಳಿ

ಇತ್ತೀಚೆಗೆ ಕಾಂಗ್ರೆಸ್ ಮುಖಂಡ ಮುಕುಂದ್​ ರಾವ್ ಭವಾನಿಮಠ ಮಾಡಿದ್ದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಕ್ರಮದಲ್ಲಿ ಪಾಲ್ಗೊಂಡ ಯಾರೇ ಇರಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಇಲಾಖೆ ಇದೆ. ನಮ್ಮವರು ಪಾಲ್ಗೊಂಡಿದ್ದರೆ ಪಕ್ಷದಿಂದಲೂ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಅಕ್ರಮಗಳು, ಕಾನೂನು ಬಾಹಿರ ಚಟುವಟಿಕೆಗಳು ಈಗಷ್ಟೇ ಕಂಡಿವೆಯಾ? ಈ ಮೊದಲು ಆಡಳಿತ ನಡೆಸಿದವರ ಅವಧಿಯಲ್ಲಿ ಇದ್ದಿಲ್ಲವೆ. ಆಗ ಏಕೆ ಪ್ರಶ್ನಿಸಿಲ್ಲ? ಅದೆಲ್ಲಕ್ಕಿಂತ ಮುಖ್ಯವಾಗಿ ನೀವು ಯಾವ ಪಾರ್ಟಿಯಲ್ಲಿದ್ದೀರಿ ಎಂಬುದನ್ನು ಬಹಿರಂಗಪಡಿಸಿ ಎಂದರು.

ಒಂದೇ ಮನೆಯಲ್ಲಿದ್ದರೂ ಪತ್ನಿ ಬಿಜೆಪಿ, ನೀವು ಕಾಂಗ್ರೆಸ್ ಎನ್ನುತ್ತೀರಿ. ಇದು ರಾಜಕಾರಣವೇ? ಮೊದಲು ನಿಮ್ಮ ನೆಲೆಯನ್ನು ಸ್ಪಷ್ಟಪಡಿಸಿ. ಬೆಂಬಲಿಗರಲ್ಲಿ ಒಳ್ಳೆಯವರು ಇರುತ್ತಾರೆ, ಕೆಟ್ಟವರೂ ಇರುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.