ಗಂಗಾವತಿ(ಕೊಪ್ಪಳ): ಜೆಡಿಎಸ್ ಪಕ್ಷದಿಂದ ಘೋಷಣೆ ಮಾಡಲಾಗಿರುವ 93 ಅಭ್ಯರ್ಥಿಗಳಲ್ಲಿ ಕನಕಗಿರಿ ವಿಧಾನಸಭಾ ಕ್ಷೇತ್ರದ ಅಶೋಕ್ ಉಮಲೂಟಿ ಮೂಲತಃ ಬಿಜೆಪಿಯವರಾಗಿದ್ದು, ಈ ಅಭ್ಯರ್ಥಿಯನ್ನು ಬದಲಿಸುವಂತೆ ಒತ್ತಾಯಿಸಿ ಶೀಘ್ರ ನಿಯೋಗ ಹೋಗುವುದಾಗಿ ಟಿಕೆಟ್ ಆಕಾಂಕ್ಷಿ ಮಾದಿಗ ಸಮಾಜದ ಮುಖಂಡ ಸಂದೀಪ್ ತಿಳಿಸಿದ್ದಾರೆ.
ನಗರದಲ್ಲಿಂದು ಈ ಕುರಿತು ಮಾಧ್ಯಮದವರೊಂದಿಗೆಮಾತನಾಡಿದ ಅವರು, ಕನಕಗಿರಿ ಕ್ಷೇತ್ರದ ಜೆಡಿಎಸ್ ಕ್ಯಾಂಡಿಡೇಟ್ ಅಶೋಕ್ ಉಮಲೂಟಿ ಬಿಜೆಪಿ ಹಿನ್ನೆಲೆ ಹೊಂದಿದ್ದಾರೆ. ಉಮಲೂಟಿ ಪ್ರಬಲ ಸಮುದಾಯದ ಅಭ್ಯರ್ಥಿ ಅಲ್ಲದ ಕಾರಣ ಠೇವಣಿ ಕಳೆದುಕೊಂಡು ಸೋಲ ಅನುಭವಿಸಬೇಕಾಗುತ್ತದೆ. ಎಡಗೈ ಸಮುದಾಯಕ್ಕೆ ಸೇರಿದ ನನಗೆ ಟಿಕೆಟ್ ನೀಡಿದ್ದಲ್ಲಿ ಸುಮಾರು 40ರಿಂದ 50 ಸಾವಿರ ಮತಗಳು ನಮ್ಮವರದ್ದೇ ಸಿಗಲಿವೆ ಎಂದಿದ್ದಾರೆ.
ಸಿಂಧನೂರು ಪುರಸಭೆಯ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿ ಪರಾಭವಗೊಂಡಿದ್ದಾರೆ. ಅವರ ಸಮುದಾಯದ ಮತಗಳು ಕೇವಲ ಮೂರರಿಂದ ಐದು ಸಾವಿರ ಅಷ್ಟೇ. ಹೀಗಾಗಿ ಅಭ್ಯರ್ಥಿಯನ್ನು ಬದಲಿಸುವಂತೆ ಒತ್ತಾಯಿಸಿ ಶೀಘ್ರ ಬೆಂಗಳೂರಿಗೆ ತೆರಳಲಾಗುವುದು. ಈ ವಿಚಾರವನ್ನು ಈಗಾಗಲೇ ಕೊಪ್ಪಳ ಜಿಲ್ಲಾ ಜೆಡಿಎಸ್ ಘಟಕದ ಅಧ್ಯಕ್ಷರ ಗಮನಕ್ಕೂ ತರಲಾಗಿದೆ. ಪಂಚರತ್ನ ಯಾತ್ರೆ ನಡೆಯುತ್ತಿರುವ ಕಾರಣಕ್ಕೆ ಶೀಘ್ರ ಬೆಂಗಳೂರಿಗೆ ತೆರಳಿ ಒತ್ತಾಯಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ: ಬೆಳಗಾವಿಯಲ್ಲಿ ರಮೇಶ್ ಜಾರಕಿಹೊಳಿ, ಈಶ್ವರಪ್ಪ ಮಾತುಕತೆ... ಬೆಂಗಳೂರಿನತ್ತ ಸಚಿವ ಆಕಾಂಕ್ಷಿಗಳು