ಕುಷ್ಟಗಿ (ಕೊಪ್ಪಳ): ಜಿಲ್ಲೆಯ ಕುಷ್ಟಗಿ ತಾಲೂಕಿನ ಶಿರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೇಗೂರು ಗ್ರಾಮದ ವಿದ್ಯುತ್ ಕಂಬಗಳು ಶಿಥಿಲಗೊಂಡು ಮುರಿದು ಬೀಳುವ ಸ್ಥಿತಿಯಲ್ಲಿವೆ.
ಸುಮಾರು 45ಕ್ಕೂ ಹೆಚ್ಚು ಕಂಬಗಳವಿದ್ಯುತ್ ಸಂಪರ್ಕ ಕಲ್ಪಿಸುವ ಈಮುಖ್ಯ ಕಂಬವು ಎರಡು ತಿಂಗಳ ಹಿಂದೆಯೇ ಮುರಿದು ಬೀಳುವ ಸ್ಥಿತಿಯಲ್ಲಿದ್ದು, ಅಪಾಯವನ್ನು ಆಹ್ವಾನಿಸಿದೆ. ಇಷ್ಟಾಗಿಯೂ ಜೆಸ್ಕಾಂ ಹೊಸ ಕಂಬ ಅಳವಡಿಸದೇ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಗ್ರಾಮಸ್ಥರ ಆರೋಪ. ವಿದ್ಯುತ್ ಕಂಬ ಮುರಿದ ಪರಿಣಾಮ ಯಾವ ಹೊತ್ತಿನಲ್ಲಿ ಬೀಳುತ್ತದೆ ಎನ್ನುವ ಚಿಂತೆ ಸ್ಥಳೀಯರದ್ದು.
ಮಳೆ, ಬಿರುಗಾಳಿ ಮುನ್ಸೂಚನೆ ಇಲ್ಲದೇ ಬೀಸುತ್ತಿದೆ ಅಪಾಯವನ್ನುಅರಿತು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ. ಅಧ್ಯಕ್ಷೆ ಸೌಭಾಗ್ಯ ಪರಸಪ್ಪ ಮೇಗೂರು ಒತ್ತಾಯಿಸಿದ್ದಾರೆ. ಮುರಿದ ಕಂಬಗಳನ್ನು ತೆರವುಗೊಳಿಸಿ ಹೊಸ ಕಂಬ ಹಾಕದೇ ವಿಳಂಬ ದೋರಣೆ ಅನುಸರಿಸಿದರೆ ಗ್ರಾಮಸ್ಥರೊಂದಿಗೆ ಜೆಸ್ಕಾಂ ಎಇಇ ಕಾರ್ಯಾಲಯಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.