ಗಂಗಾವತಿ: ರಾಜ್ಯ ರಾಜಕೀಯದಲ್ಲಿ ಒಮ್ಮೆ ಬಿಜೆಪಿಯತ್ತ ಮತ್ತೊಮ್ಮೆ ಕಾಂಗ್ರೆಸ್ನತ್ತ ವಾಲುತ್ತಿರುವ ಜೆಡಿಎಸ್ ನಾಯಕರ ಪಕ್ಷ ಬದಲಾವಣೆ ಸ್ಥಿತಿ ಇದೀಗ ಜಿಲ್ಲಾ ಮತ್ತು ತಾಲೂಕು ಮಟ್ಟಕ್ಕೂ ವಿಸ್ತರಿಸಿದೆ.
ಕಂಪ್ಲಿಯಲ್ಲಿ ಬಳ್ಳಾರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಕೆ.ಸಿ.ಕೊಂಡಯ್ಯ ಪರ ಹಮ್ಮಿಕೊಳ್ಳಲಾಗಿದ್ದ ಪಕ್ಷದ ವೇದಿಕೆ ಕಾರ್ಯಕ್ರಮದಲ್ಲಿ ಜೆಡಿಎಸ್ ಪಕ್ಷದ ರಾಜ್ಯ ಉಪಾಧ್ಯಕ್ಷ, ಮಾಜಿ ಎಂಎಲ್ಸಿ ಎಚ್.ಆರ್. ಶ್ರೀನಾಥ್ ಕಾಣಿಸಿಕೊಂಡರು.
![H.R. Srinath](https://etvbharatimages.akamaized.net/etvbharat/prod-images/kn-gvt-01-02-jds-state-wp-attend-congress-function-pic-kac10005_02122021062021_0212f_1638406221_578.jpg)
ಸದ್ಯಕ್ಕೆ ಜೆಡಿಎಸ್ ಪಕ್ಷವನ್ನು ಪ್ರತಿನಿಧಿಸುತ್ತಿರುವ ಶ್ರೀನಾಥ್, ಇನ್ನೂ ಅಧಿಕೃತವಾಗಿ ಕಾಂಗ್ರೆಸ್ ಸೇರಿಲ್ಲ. ಆದರೂ ಕಾಂಗ್ರೆಸ್ ಶಾಲು ಹೊದ್ದು ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಚರ್ಚೆಗೆ ಗ್ರಾಸವಾಗಿದ್ದಾರೆ.