ಗಂಗಾವತಿ : ತುಂಗಭದ್ರಾ ನದಿಯ ನಡುಗಡ್ಡೆ ಆನೆಗೊಂದಿ ಬಳಿಯ ನವವೃಂದಾವನದಲ್ಲಿ ಜಯತೀರ್ಥರ ಆರಾಧನಾ ಮಹೋತ್ಸವ ಜರುಗಿತು. ಈ ಸಂದರ್ಭದಲ್ಲಿ ಜಯತೀರ್ಥರು ರಚಿಸಿದ ಧಾರ್ಮಿಕ ಗ್ರಂಥಗಳ ಪಾರಾಯಣ, ಗ್ರಂಥಗಳ ಮೇಲೆ ರಚಿತ ಭಾಷ್ಯಗಳ ಬಗ್ಗೆ ವಿದ್ವಾಂಸರು ಉಪನ್ಯಾಸ ನೀಡಿದರು.
ಭಜನೆ, ಸಂಗೀತ, ಧರ್ಮೋಪದೇಶ, ಸುಹಾಸಿನಿಯರ ಸಮಾರಾಧನೆ ನಡೆದವು. ಪಂಡಿತರಾದ ಕಡಪ ಧೀರೇಂದ್ರ ಆಚಾರ್, ಆಯಾಚಿ ಧೀರೇಂದ್ರ ಆಚಾರ್ ನೇತೃತ್ವದಲ್ಲಿ ಧಾರ್ಮಿಕ ಕೈಂಕರ್ಯಗಳು ಜರುಗಿದವು.
ಪ್ರಮುಖರಾದ ಗುರುಪ್ರಸಾದ್ ಆಚಾರ್, ಗುರುಪ್ರಸಾದ್, ಪವಮಾನ ಆಚಾರ್, ನರಸಿಂಹ ಆಚಾರ್, ಸುಮಂತ್ ಕುಲಕರ್ಣಿ, ನರಸಿಂಹ ಆಚಾರ್, ವಿಜಯೇಂದ್ರ ಭಾಗಿಯಾಗಿದ್ದರು.