ETV Bharat / state

ಜನತಾ ಕರ್ಫ್ಯೂನಿಂದ ವಾಹನ ಸಂಚಾರ ಸ್ತಬ್ಧ: ಊರಿಗೆ ತೆರಳಲು 45 ಕಿ.ಮೀ. ಕಾಲ್ನಡಿಗೆ..! - coronavirus updates

ಜನತಾ ಕರ್ಪ್ಯೂ ಬಗ್ಗೆ ಮಾಹಿತಿ ಇಲ್ಲದೆ ಗಂಗಾವತಿ ಪಟ್ಟಣಕ್ಕೆ ಬಂದ ಜನರು, ಊರಿಗೆ ತೆರಳಲು ವಾಹನ ವ್ಯವಸ್ಥೆಯಿಲ್ಲದೆ ಪರದಾಡಿದ ದೃಶ್ಯ ಕಂಡುಬಂತು.

Jantha Curfew in Gangavati
ಬಸ್ಸಿಲ್ಲದೆ ನಡೆದುಕೊಂಡೇ ಹೋದ ಜನ
author img

By

Published : Mar 22, 2020, 7:41 PM IST

ಗಂಗಾವತಿ : ಜನತಾ ಕರ್ಪ್ಯೂ ಬಗ್ಗೆ ಮಾಹಿತಿಯಿಲ್ಲದೆ ಪಟ್ಟಣಕ್ಕೆ ಬಂದಿದ್ದ ಜನರು ಊರಿಗೆ ತೆರಳಲು ವಾಹನ ಸಿಗದೆ ಪರದಾಡಿದ ಪ್ರಸಂಗ ನಡೆಯಿತು.

ಬೆಂಗಳೂರಿನಿಂದ ಬಂದಿದ್ದ ಕುಷ್ಟಗಿ ತಾಲೂಕಿನ ತಾವರಗೆರೆಯ ಐದಕ್ಕೂ ಹೆಚ್ಚು ಮಕ್ಕಳು, ಮೂರು ಜನ ಮಹಿಳೆಯರು ಸೇರಿದಂತೆ ಒಟ್ಟು ಹನ್ನೊಂದು ಜನರು ಊರಿಗೆ ತೆರಳಲು ವಾಹನ ಸೌಲಭ್ಯವಿಲ್ಲದೆ ಸುಮಾರು 45.ಕಿ.ಮೀ ದೂರ ನಡೆದುಕೊಂಡೆ ಹೋದರು.

ಬಸ್ಸಿಲ್ಲದೆ 45 ಕಿಲೋಮೀಟರ್​ ಕಾಲ್ನಡಿಗೆಯಲ್ಲೇ ತೆರಳಿದ ಜನರು

ಇದೇ ರೀತಿ ಗ್ರಾಮೀಣ ಭಾಗದ ಹಲವು ಮಂದಿ, ಬಂದ್​ ಬಗ್ಗೆ ಯಾವುದೇ ಮಾಹಿತಿ ಇಲ್ಲದ ಕಾರಣದಿಂದ ಅತ್ತ ಕಡೆ ಊರಿಗೂ ತೆರಳಲಾಗದೆ, ಇತ್ತ ಕಡೆ ಪಟ್ಟಣದಲ್ಲೂ ಇರಲಾಗದೆ ಪರದಾಡುತ್ತಿದ್ದ ದೃಶ್ಯ ಕಂಡು ಬಂತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.