ಗಂಗಾವತಿ: ಇಂದು ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು ತಮ್ಮ ಆಪ್ತ ಸ್ನೇಹಿತ, ಸಚಿವ ಶ್ರೀರಾಮುಲು ಅವರ ಜೊತೆ ತಾಲೂಕಿನ ಆನೆಗೊಂದಿ ಸಮೀಪದ ಪಂಪಾಸರೋವರಕ್ಕೆ ಭೇಟಿ ನೀಡಿದ್ದರು.
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅನೇಕ ವರ್ಷಗಳಿಂದ ಸ್ನೇಹಿತ ಶ್ರೀರಾಮುಲು ಅವರು ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಿದ್ದಾರೆ. ಆನೆಗೊಂದಿ, ಹಂಪಿ, ಅಂಜನಾದ್ರಿ ಜೊತೆ ಅವಿನಾಭಾವ ಸಂಬಂಧ ಇದೆ. ನಾವು ಜಿಲ್ಲೆಗಳನ್ನು ವಿಭಜನೆ ಮಾಡಿಕೊಂಡಿದ್ದೇವೆ. ಭುವನೇಶ್ವರಿಯ ಆಶೀರ್ವಾದದಿಂದ ಶ್ರೀರಾಮುಲು ಉತ್ತಮ ಕೆಲಸ ಮಾಡುತ್ತಿದ್ದಾರೆ. ಅವರ ರಾಜಕೀಯ ಹಾದಿಯಲ್ಲೇ ನಾನು ನಡೆಯುವೆ ಎಂದರು.
ಕೇವಲ ರಾಜ್ಯದ ಒಂದಿಷ್ಟು ಭಾಗ ಅಥವಾ ಕಲ್ಯಾಣ ಕರ್ನಾಟಕವಲ್ಲ. ಸಮಗ್ರ ಕರ್ನಾಟಕ ಅಭಿವೃದ್ಧಿಯಾಗಬೇಕು. ಸದ್ಯಕ್ಕೆ ಶ್ರೀರಾಮುಲು ತಮಗೆ ಸಿಕ್ಕಿರುವ ಖಾತೆಯನ್ನು ಸಮರ್ಪಕವಾಗಿ ನಿಭಾಯಿಸುವ ಮೂಲಕ ಉತ್ತಮ ಆಡಳಿತ ನೀಡುತ್ತಿದ್ದಾರೆ. ಇದರಿಂದ ಸಂತಸವಾಗಿದೆ ಎಂದು ಸ್ನೇಹಿತ ಬಗ್ಗೆ ಹಾಡಿ ಹೊಗಳಿದರು.
ಇದನ್ನೂ ಓದಿ: ತುಮಕೂರಲ್ಲಿ ಬುದ್ಧಿಮಾಂದ್ಯೆ ಮೇಲೆ ಅತ್ಯಾಚಾರ ಕೇಸ್: ಎಎಸ್ಐಗೆ 20 ವರ್ಷ ಜೈಲು ಶಿಕ್ಷೆ
ಇನ್ನೂ ರಾಜಕೀಯ ವಿಚಾರಚಾಗಿ ಮುಂಬರುವ ದಿನಗಳಲ್ಲಿ ತೆಗೆದುಕೊಳ್ಳುವ ತೀರ್ಮಾನಗಳನ್ನು ನಿಮ್ಮ ಮೂಲಕ ಹೇಳುವೆ ಎಂದು ಮುನ್ನೆಡೆದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ